ರಾಜಣ್ಣ ರಾಜೀನಾಮೆ| ಎರಡು ಕೈ ಮುಗಿದು ಒಳಗೆ ಹೋದ ಡಿಕೆಶಿ

ಬೆಂಗಳೂರು: ಸಹಕಾರ ಸಚಿವ ಕೆಎನ್‌ ರಾಜಣ್ಣ (KN Rajanna) ರಾಜೀನಾಮೆ ಬಗ್ಗೆ ಕೇಳಿದ್ದಕ್ಕೆ ಡಿಕೆ ಶಿವಕುಮಾರ್‌ (DK Shivakumar) ಎರಡು ಕೈ ಮುಗಿದು ಒಳ ನಡೆದಿದ್ದಾರೆ.

ರಾಜಣ್ಣ ರಾಜೀನಾಮೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ವಿಧಾನಸೌಧದಲ್ಲಿ ಮಾಧ್ಯಮಗಳು ಪ್ರಶ್ನಿಸಿದವು. ಈ ವೇಳೆ ಡಿಸಿಎಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮತ್ತಷ್ಟು ಪ್ರಶ್ನೆ ಕೇಳಿದಾಗ ಡಿಕೆಶಿ ಎರಡು ಕೈ ಮುಗಿದು ಸಿಎಂ ಸಿದ್ದರಾಮಯ್ಯ ಅವರ ಕೊಠಡಿಗೆ ತೆರಳಿದರು.  ಇದನ್ನೂ ಓದಿ: ಕೆಎನ್‌ ರಾಜಣ್ಣ ಏನು ತಪ್ಪು ಹೇಳಿದ್ದಾರೆ ಪುತ್ರ ರಾಜೇಂದ್ರ ಪಶ್ನೆ

ರಾಜಣ್ಣ ಅವರ ಪುತ್ರ, ಪರಿಷತ್‌ ಸದಸ್ಯ ರಾಜೇಂದ್ರ ಅವರು ತಂದೆಯ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್ರಾಜಣ್ಣ ರಾಜೀನಾಮೆ

ರಾಜಣ್ಣ ಅವರು ಮೊದಲಿನಿಂದಲೂ ಸಿಎಂ ಪರವಾಗಿಯೇ ಬ್ಯಾಟ್‌ ಬೀಸುತ್ತಿದ್ದರು. ಹೀಗಾಗಿ ಆಪ್ತನ ರಾಜೀನಾಮೆಯನ್ನು ಸಿಎಂ ಪಡೆದುಕೊಳ್ಳುತ್ತಾರಾ ಇಲ್ವೋ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಹೈಕಮಾಂಡ್‌ನಿಂದ ಸ್ಪಷ್ಟವಾದ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ಅಂಗೀಕಾರಿಸಿದ್ದಾರೆ.