ಸೂಕ್ತ ಭದ್ರತೆ ಇದ್ದಿದ್ರೆ, ಲೋಕಾಯುಕ್ತರ ಮೇಲೆ ದಾಳಿ ಆಗ್ತಿರಲಿಲ್ಲ: ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ ಅಡಿ

ಬಾಗಲಕೋಟೆ: ಸೂಕ್ತ ಭದ್ರತೆ ಇದ್ದಿದ್ದರೆ ಲೋಕಾಯುಕ್ತರ ಮೇಲೆ ದಾಳಿ ಆಗ್ತಿರಲಿಲ್ಲ, ಲೋಕಾಯುಕ್ತರಿಗೆ ಈ ಗತಿಯಾದರೆ ಇನ್ನೂ ಸಾಮಾನ್ಯ ಜನರ ಸ್ಥಿತಿ ಏನಾಗಬೇಡ ಎಂದು ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರಿಗೆ ಸೂಕ್ತ ಭದ್ರತೆಯನ್ನ ಒದಗಿಸಬೇಕು. ಭದ್ರತೆಗೆ ಕೇವಲ ಪೊಲೀಸರನ್ನ ನಿಯೋಜನೆ ಮಾಡಿದ್ರೆ ಸಾಲದು, ಪರಿಣಿತ ಪೊಲೀಸರನ್ನ ನಿಯೋಜಿಸಬೇಕು. ಅಲ್ಲಿದ್ದ ಪೊಲೀಸರಿಗೆ ಲಾಠಿ, ಕೋಲು ಹಿಡಿಯೋದನ್ನ ಬಿಟ್ಟರೆ ಬೇರೆ ಯಾವ ಅನುಭವ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲೋಕಾಯುಕ್ತರಿಗೆ ಎಲ್ಲೆಲ್ಲಿ ಇರಿಯಲಾಗಿದೆ? ಈಗ ಹೇಗಿದ್ದಾರೆ: ಮಲ್ಯ ಆಸ್ಪತ್ರೆ ವೈದ್ಯರು ಹೇಳ್ತಾರೆ ಓದಿ

ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಈಗ ಸೆಕ್ಯೂರಿಟಿ ನೀಡಬೇಕಿದೆ. ಲೋಕಾಯುಕ್ತ ಸಂಸ್ಥೆಯ ಭದ್ರತೆಯನ್ನ ಕಡೆಗಣಿಸಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಲೋಕಾಯುಕ್ತ ಸಂಸ್ಥೆ ಇರುವುದು ಜನರಿಗಾಗಿ, ಇಲ್ಲಿ ಎಲ್ಲಾ ರೀತಿಯ ಜನ್ರು ಲೋಕಾಯುಕ್ತರ ಬಳಿ ಬರುತ್ತಿರುತ್ತಾರೆ. ಕೆಲವೊಮ್ಮೆ ಕೆಟ್ಟ ಜನರೂ ಬರ್ತಾರೆ, ಅಂತಹ ಜನರು ಬಂದಾಗ ಸೆಕ್ಯೂರಿಟಿ ಅವಶ್ಯಕವಾಗಿದೆ. ಇಂತಹ ಅನಾಹುತಗಳನ್ನು ತಪ್ಪಿಸಲು ಜನರನ್ನು ಲೋಕಾಯುಕ್ತರಿಂದ ದೂರ ಇಟ್ಟರೆ ಅದರಿಂದ ದುಷ್ಪರಿಣಾಮಗಳೇ ಹೆಚ್ಚಾಗುತ್ತದೆ. ಆದ್ದರಿಂದ ಜನರಿಗೆ ಲೋಕಾಯುಕ್ತರನ್ನ ಭೇಟಿ ಮಾಡಲು ಅವಕಾಶವನ್ನ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ

ಹಲ್ಲೆಗೆ ಒಳಗಾಗಿರುವ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ರಾಜ್ಯ ಸರ್ಕಾರವೂ ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆಯನ್ನ ಹೆಚ್ಚಿಸಲು ಸುತ್ತೋಲೆಯನ್ನ ಹೊರಡಿಸಿದೆ.

Comments

Leave a Reply

Your email address will not be published. Required fields are marked *