ನಗರ ಪ್ರದೇಶದಲ್ಲಿ ಬಿಜೆಪಿಯ ಒಲವು ಕಡಿಮೆಯಾಗಿದೆ: ಎಚ್‍ಡಿಕೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ನೋಡುವಾಗ ನಗರ ಪ್ರದೇಶದಲ್ಲಿ ಬಿಜೆಪಿಯ ಒಲವು ಕಡಿಮೆ ಆಗಿದೆ ಎನ್ನುವುದು ತಿಳಿಯುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರ ಪ್ರದೇಶದ ಜನತೆಗೆ ಬಿಜೆಪಿ ಕಡೆಗೆ ಹೆಚ್ಚಿನ ಒಲವು ಇದೆ ಎನ್ನುವ ಭಾವನೆ ಮೊದಲಿನಿಂದಲೂ ಇದೆ. ಆದರೆ ಇದೀಗ ನಗರ ಪ್ರದೇಶದಲ್ಲೂ ಬಿಜೆಪಿ ಒಲವು ಕಡಿಮೆ ಆಗುತ್ತಿದೆ ಎಂದು ಇವತ್ತಿನ ಫಲಿತಾಂಶದ ಮೂಲಕ ಪರಾಮರ್ಶಿಸಬಹುದು ಎಂದು ಹೇಳಿದರು.

ಬಿಜೆಪಿ ನಾಯಕರ ಹಾಗೆ ನಾವು ಜಿಲ್ಲಾವಾರ್ ಮಾಡಿಲ್ಲ, ಜನರಲ್ಲಿ ಮನವಿ ಮಾಡಿದ್ದೇವೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಮತ ನೀಡಿದ್ದಾರೆ ಎಂದರು.

100 ದಿನಗಳ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮೈತ್ರಿ ಸರ್ಕಾರದ ಆಡಳಿತವನ್ನು ಜನತೆ ಬೆಂಬಲಿಸಿದ್ದಾರೆ. ಮತದಾರರರಿಗೆ ನಾನು ಗೌರವಪೂರ್ವ ವಂದನೆಗಳನ್ನು ಎರಡು ಪಕ್ಷದ ಪರವಾಗಿ ಸಲ್ಲಿಸಲು ಬಯಸುತ್ತೇನೆ. ಉತ್ತರ ಕರ್ನಾಟಕಕ್ಕೆ ಪ್ರವಾಸಕ್ಕೆ ಹೋಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಎಸ್‍ವೈ ಯಾವ ಯಾವ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದರು, ಅದನ್ನ ಹೇಳ್ತಿನಿ. ಎಲ್ಲಾ ದಾಖಲೆಗಳನ್ನ ಇಡುತ್ತೇನೆ ಎಂದು ಅವರಿಗೆ ತಿರುಗೇಟು ನೀಡಿದರು.

ಸದ್ಯಕ್ಕೆ ಅತಂತ್ರ ಪರಿಸ್ಥಿತಿ ಇರುವ ಕಡೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಸಾಧ್ಯತೆಗಳಿವೆ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಬಗ್ಗೆ ಒಟ್ಟಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *