ಸ್ಥಳೀಯಾಡಳಿತಗಳ ಚುನಾವಣೆ ಯಶಸ್ವಿ – ಡಿ.30ಕ್ಕೆ ಫಲಿತಾಂಶ

ಬೆಂಗಳೂರು: ರಾಜ್ಯದ 31 ಜಿಲ್ಲೆಗಳ 58 ಪುರಸಭೆ, 57 ಗ್ರಾಮ ಪಂಚಾಯತ್‍ಗಳ ಚುನಾವಣೆಗೆ ಇಂದು ಮತದಾನ ನಡೀತು. ಹಲವು ಜಿಲ್ಲೆಗಳಲ್ಲಿ ಚುನಾವಣೆ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ.

ರಾಮನಗರದ ಬಿಡದಿ ಪುರಸಭೆಯ ಕಲ್ಲುಗೋಪಹಳ್ಳಿ ಮತಗಟ್ಟೆ ಬಳಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡ್ರು. ಕೇತಗಾನಹಳ್ಳಿ ಮತಗಟ್ಟೆ ಸಂಖ್ಯೆ 7ರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮತದಾನ ಮಾಡಿದ್ರು. ಇದೇ ಮತಗಟ್ಟೆ ಬಳಿ ಪುಟಾಣಿ ಮಕ್ಕಳು ಪಕ್ಷದ ಶಾಲುಗಳನ್ನು ಹಾಕಿಕೊಂಡು ಕ್ಯಾನ್ವಾಸ್ ಮಾಡಿದ್ದು ವಿಶೇಷವಾಗಿತ್ತು. ವಿಜಯಪುರದ ಅಲಮೇಲ ಪಟ್ಟಣ ಪಂಚಾಯತ್‍ನಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರ ನಡುವೆ ಮಾರಾಮಾರಿ ನಡೀತು.  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಾಳೆಯಿಂದ ಎರಡು ದಿನ ಕೇಸರಿ ಕಹಳೆ – ಕೆಲ ಸಚಿವರಿಗೆ ಢವಢವ, ಜೆ.ಪಿ.ನಡ್ಡಾ ಬರ್ತಾರಾ..?

ಯಾದಗಿರಿಯ ಕಕ್ಕೇರಿ ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್-ಬಿಜೆಪಿ ನಾಯಕರ ದುರ್ವರ್ತನೆಗೆ ಪೊಲೀಸರು ಅಸಹಾಯಕರಾದ್ರು. ಸಿಕ್ಕಸಿಕ್ಕವರು ಮತಗಟ್ಟೆ ಒಳಗೆ ನುಗ್ಗುತ್ತಿದ್ರು. ಬೆಳಗಾವಿಯ ರಾಯಬಾಗದ ಮುಗಳಖೋಡ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೆ ಮುಂದೆ ವಾಮಾಚಾರ ನಡೆಸಿದ್ದಾರೆ. ಇದನ್ನು ಹೊರತು ಪಡಿಸಿ ಉಳಿದ ಕಡೆ ಮತದಾನ ಯಶಸ್ವಿಯಾಗಿದ್ದು, ಡಿಸೆಂಬರ್ 30ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ- ಮತದಾರರನ್ನು ಸೆಳೆಯಲು ಮಾಟ-ಮಂತ್ರ

Comments

Leave a Reply

Your email address will not be published. Required fields are marked *