100 ರೇಷನ್ ಕಾರ್ಡ್ ತಾಂಡಾಗಳಿಗೊಂದು ನ್ಯಾಯ ಬೆಲೆ ಅಂಗಡಿ

ಬೆಳಗಾವಿ: 100 ರೇಷನ್ ಕಾರ್ಡ್ ಹೊಂದಿರುವ ತಾಂಡಾಗಳಿಗೆ ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ಕೊಡಲು ಸರ್ಕಾರ ಸಿದ್ಧ ಎಂದು ವಿಧಾನಪರಿಷತ್ ಅಧಿವೇಶನದಲ್ಲಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ನಿಯಮ 330ರ ಅಡಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ವಿಷಯ ಪ್ರಸ್ತಾಪ ಮಾಡಿದರು. 100 ರೇಷನ್ ಕಾರ್ಡ್ ಹೊಂದಿರುವ ತಾಂಡಾಗಳಿಗೆ ಒಂದು ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಯೋಜನೆ ಘೋಷಣೆ ಮಾಡಿದ್ದರು. ಯೋಜನೆ ಘೋಷಣೆ ಮಾಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ತಾಂಡಾಗಳಲ್ಲಿನ ಜನರ ದೌರ್ಜನ್ಯ ತಡೆಗೆ ಸಮಿತಿ ಇದ್ದರೂ ದೌರ್ಜನ್ಯ ನಿಂತಿಲ್ಲ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಅಂಜಲಿ ಪಾದಯಾತ್ರೆಗೆ ಸಿದ್ದರಾಮಯ್ಯ ಸಾಥ್ – ಪೋಲಿಸರಿಗೆ ಎಚ್ಚರಿಕೆ

ಇದಕ್ಕೆ ಉತ್ತರ ನೀಡಿದ ಸಚಿವ ಉಮೇಶ್ ಕತ್ತಿ, 100 ರೇಷನ್ ಕಾರ್ಡ್ ಇರುವ ತಾಂಡಾಗಳಿಗೆ ಒಂದು ನ್ಯಾಯ ಬೆಲೆ ಅಂಗಡಿ ನೀಡಲು ಆದೇಶ ಹೊರಡಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ 375 ನ್ಯಾಯ ಬೆಲೆ ಅಂಗಡಿ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಜಿಲ್ಲಾ ಆಹಾರ ಇಲಾಖೆಯ ಜಿಲ್ಲೆಯ ಅಧಿಕಾರಿಗೆ ಅಧಿಕಾರ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಬೇಕು ಎಂದು ಅರ್ಜಿ ಸಲ್ಲಿಸಿದರೆ ನ್ಯಾಯಬೆಲೆ ಅಂಗಡಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಉಭಯ ಸದನಗಳಲ್ಲೂ ‘ಅಪ್ಪು’ ಗುಣಗಾನ

Comments

Leave a Reply

Your email address will not be published. Required fields are marked *