ಗೃಹಲಕ್ಷ್ಮಿ ಹಣ, ಸರ್ಕಾರದಿಂದ ಚಿಟ್‌ ಫಂಡ್‌ – ಏನಿದು ಹೊಸ ಪ್ಲ್ಯಾನ್‌?

ಬೆಂಗಳೂರು: ಗ್ಯಾರಂಟಿ (Congress Guarantee) ಗಿಫ್ಟ್ ಕೊಟ್ಟ ಸರ್ಕಾರದಿಂದ ನಯಾ ಪ್ಲ್ಯಾನ್‌ ಸಿದ್ದವಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ (Gruhalakshmi) ಗಿಫ್ಟ್ ಕೊಟ್ಟ ಸರ್ಕಾರ ಅದೇ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ (Chit Fund) ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ರೆಡಿ ಮಾಡಿದೆ.

ಹೌದು. ಕೇರಳ ಮಾದರಿಯ ನಯಾ ಚಿಟ್‌ಫಂಡ್‌ನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಎಂಎಸ್‌ಐಎಲ್‌ನಿಂದ ಏಪ್ರಿಲ್‌ನಲ್ಲಿ ಈ ನಯಾ ಸ್ವರೂಪದ ಚಿಟ್‌ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದೆ. ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್‌ಫಂಡ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

 

ಹೇಗಿರಲಿದೆ ಚಿಟ್‌ ಫಂಡ್‌?
ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್‌ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್‌ ಮಾಡಲಾಗಿದೆ.

ಕೇರಳದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು ಕರ್ನಾಟಕದಲ್ಲಿ ಸದ್ಯ ಚಿಟ್‌ಫಂಡ್ ಉದ್ಯಮ 300 ಕೋಟಿ ರೂ, ಮಾತ್ರವಿದೆ. 10 ಸಾವಿರ ಕೋಟಿ ರೂ. ಲಾಭದಾಯಕವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.  ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್‌ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಹಾಕಲಾಗಿದೆ.