ಒತ್ತುವರಿದಾರರಿಗೆ ಸಿಂಹಸ್ವಪ್ನವಾಗಿದ್ದ ಬಿಎಂಟಿಎಫ್ ಮುಚ್ಚಲು ನಿರ್ಧಾರ?

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಬಳಿಕ ಮತ್ತೊಂದು ಸಂಸ್ಥೆ ಮೇಲೆ ಸರ್ಕಾರ ಕಣ್ಣು ಹಾಕಿದ್ದು, ಒತ್ತುವರಿ ಮತ್ತು ಭೂಕಬಳಿಕೆ ತಡೆಗೆ ರಚಿಸಿದ್ದ ಬೆಂಗಳೂರು ಮೆಟ್ರೊಪಾಲಿಟನ್ ಕಾರ್ಯಪಡೆಗೆ(ಬಿಎಂಟಿಎಫ್) ಇತಿಶ್ರೀ ಹಾಡಲು ಚಿಂತನೆ ನಡೆಸಿದೆ.

ಹೌದು. ಸ್ಲಮ್ ಬೋರ್ಡ್, ಬಿಡಿಎ, ಬಿಎಂಟಿಎಫ್ ಪೊಲೀಸ್ ವಿಂಗ್ ಮುಚ್ಚಲು ಸರ್ಕಾರ ಮುಂದಾಗಿದೆ. 3 ಪೊಲೀಸ್ ವಿಂಗ್ ಮುಚ್ಚಿ ಹೊಸ ಸೆಕ್ಯೂರಿಟಿ ಫೋರ್ಸ್ ತರಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸಿಟಿ ಸೆಕ್ಯೂರಿಟಿ ಫೋರ್ಸ್ ಎಂಬ ಹೊಸ ಪಡೆ ರಚನೆ ಮಾಡಲು ನಿರ್ಧಾರ ಮಾಡಿದ್ದು, 3 ಇಲಾಖೆಗಳ ದೂರುಗಳನ್ನು ಒಂದೇ ವ್ಯಾಪ್ತಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಒತ್ತುವರಿ ತೆರವು ಅಕ್ರಮ ವಾಸ ಸೇರಿದಂತೆ ಎಲ್ಲಾ ದೂರುಗಳು ಇದರ ವ್ಯಾಪ್ತಿಗೆ ಬರಲಿದೆ.

ಬಿಬಿಎಂಪಿ ಆಯುಕ್ತರ ನಿಯಂತ್ರಣದಲ್ಲಿ ಸಿಟಿ ಸೆಕ್ಯೂರಿಟಿ ಫೋರ್ಸ್ ಬರಲಿದ್ದು, ಅಕ್ರಮ ತೆರವು ಸೇರಿದಂತೆ ಇತರೆ ಕಾರ್ಯಕ್ಕೆ ಹೋಗುವ ಅಧಿಕಾರಿಗಳಿಗೆ ಈ ಫೋರ್ಸ್ ಭದ್ರತೆ ನೀಡಲಿದೆ. ಈಗಾಗಲೇ ಬಿಬಿಎಂಪಿಯ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿರುವ ಆಯುಕ್ತರು ಕಾನೂನು ಇಲಾಖೆ ಒಪ್ಪಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

 

Comments

Leave a Reply

Your email address will not be published. Required fields are marked *