ರಾಜ್ಯದ ಜನತೆಗೆ ಏಕಕಾಲದಲ್ಲಿ ಮೂರು ಶಾಕ್ – ಹಾಲು, ವಿದ್ಯುತ್, ಸಾರಿಗೆ ಸೇರಿ ಬೆಂಗ್ಳೂರಿಗರಿಗೆ ನೀರಿನ ದರ ಏರಿಕೆ?

ಬೆಂಗಳೂರು: ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳು ಹಾಗೂ ಬೆಲೆಗಳು ನಿರಂತರವಾಗಿ ಏರಿಕೆ ಕಾಣುತ್ತಿವೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಬೇಳೆ ಕಳು, ತರಕಾರಿ ಬೆಲೆಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದು ಸಾಲದು ಅಂತಾ ಶೀಘ್ರವೇ ರಾಜ್ಯದ ಜನತೆಗೆ ಏಕಕಾಲದಲ್ಲಿ ಮೂರು ಶಾಕ್ ಎದುರಾಗಲಿವೆ.

ಹಾಲು, ವಿದ್ಯುತ್ ದರ, ಸಾರಿಗೆ ದರ ಹೆಚ್ಚಳದ ಜೊತೆ ಜೊತೆಗೆ, ಬೆಂಗಳೂರಿನ ಮಂದಿಗೆ ಹೆಚ್ಚುವರಿ ನೀರಿನ ದರ ಹೆಚ್ಚಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಈಗಾಗಲೇ ಆಯಾ ಇಲಾಖೆಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡುವುದು ಬಾಕಿ ಇದೆ. ಇದನ್ನೂ ಓದಿ: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್?

ಆದರೆ ದರ ಹೆಚ್ಚಳಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜನರ ಮೇಲೆ ಈಗ ತೆರಿಗೆ ಹಾಕೋದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದರ ಹೆಚ್ಚಳಕ್ಕೆ ಮೊದಲು ಜನರಿಗೆ ಆದಾಯ ಬರುವಂತೆ ಸರ್ಕಾರ ಮಾಡಲಿ ಅಂತಾ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸದ್ಯಕ್ಕೆ ದರ ಹೆಚ್ಚಳದ ಬಗ್ಗೆ ಯಾವುದೇ ತೀರ್ಮಾನಗಳು ಆಗಿಲ್ಲ. ದರ ಹೆಚ್ಚಳದ ಪ್ರಸ್ತಾವನೆಗಳು ಬರುವುದು ಸಹಜ ಆದ್ರೆ ಸರ್ಕಾರ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ

Comments

Leave a Reply

Your email address will not be published. Required fields are marked *