ಡ್ಯಾಂ ನೀರಿನ ಮಟ್ಟ ಬಹುತೇಕ ಕುಸಿತ – ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?

ಬೆಂಗಳೂರು: ರಾಜ್ಯದ ಜಲಾಶಯಗಳ ನೀರಿನ ಮಟ್ಟ (Dam Water level) ಬಹುತೇಕ ಕುಸಿದಿದ್ದು ಸರಿಯಾದ ಸಮಯದಲ್ಲಿ ಮಳೆ (Rain) ಸುರಿಯದೇ ಇದ್ದರೆ ಕಷ್ಟ ಎದುರಾಗುವ ಸಾಧ್ಯತೆಯಿದೆ.

ಮುಂಗಾರು ಮಳೆ (Monsoon Rain) ಇನ್ನೂ ಶುರುವಾಗಿಲ್ಲ. ಒಂದು ವಾರದ ನಂತರ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆಯಿದೆ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದಿಲ್ಲ. ಇದರ ನೇರ ಪರಿಣಾಮ ಜಲಾಶಯಗಳ ಮೇಲೆ ಬಿದ್ದಿದ್ದು, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ತಳಕಾಣುತ್ತಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ (Linganamakki Dam) ನೀರು ಬರಿದಾಗುತ್ತಿದ್ದು ಸದ್ಯ ಇರುವ ನೀರಿನಿಂದ ಇನ್ನು 25 ದಿನಗಳಷ್ಟೇ ವಿದ್ಯುತ್ (Hydel Power) ಉತ್ಪಾದಿಸಬಹುದಾಗಿದೆ. ಶರಾವತಿ ನದಿಪಾತ್ರದಲ್ಲಿ ಬೇಗ ಮಳೆಯಾಗದೇ ಇದ್ದರೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಬರೀ ಇದೊಂದೇ ಅಲ್ಲ. ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳ ಪರಿಸ್ಥಿತಿ  ಇದೇ ರೀತಿಯಿದೆ. ಹೀಗಾಗಿ ಕಳೆದ ವರ್ಷದ ಜೂನ್‌ 6 ರಂದು ನೀರು ಎಷ್ಟಿತ್ತು? ಇಂದು ಎಷ್ಟಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.  ಇದನ್ನೂ ಓದಿ: ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

ಯಾವ ಜಲಾಶಯದಲ್ಲಿ ನೀರು ಎಷ್ಟಿದೆ?
ಡ್ಯಾಂ – ಲಿಂಗನಮಕ್ಕಿ
ಸಾಮರ್ಥ್ಯ– 151 ಟಿಎಂಸಿ
2023 – 15.44 ಟಿಎಂಸಿ
2022 – 22.02 ಟಿಎಂಸಿ

ಡ್ಯಾಂ – ಆಲಮಟ್ಟಿ
ಸಾಮರ್ಥ್ಯ– 123.08 ಟಿಎಂಸಿ
2023 – 21.04 ಟಿಎಂಸಿ
2022 – 47.73 ಟಿಎಂಸಿ

ಡ್ಯಾಂ – ತುಂಗಭದ್ರಾ
ಸಾಮರ್ಥ್ಯ – 105.79 ಟಿಎಂಸಿ
2023 – 5.02 ಟಿಎಂಸಿ
2022 – 39.48 ಟಿಎಂಸಿ

ಡ್ಯಾಂ – ಕೆಆರ್‌ಎಸ್‌
ಸಾಮರ್ಥ್ಯ – 49.45 ಟಿಎಂಸಿ
2023 – 11.21 ಟಿಎಂಸಿ
2022 – 26.77 ಟಿಎಂಸಿ

ಡ್ಯಾಂ – ಹೇಮಾವತಿ
ಸಾಮರ್ಥ್ಯ – 37.10 ಟಿಎಂಸಿ
2023 – 15.68 ಟಿಎಂಸಿ
2022 – 22.90 ಟಿಎಂಸಿ

ಡ್ಯಾಂ – ಕಬಿನಿ
ಸಾಮರ್ಥ್ಯ -19.52 ಟಿಎಂಸಿ
2023 – 4.30 ಟಿಎಂಸಿ
2022 – 8.15 ಟಿಎಂಸಿ

ಡ್ಯಾಂ – ಹಾರಂಗಿ
ಸಾಮರ್ಥ್ಯ – 8.50 ಟಿಎಂಸಿ
2023 -2.60 ಟಿಎಂಸಿ
2022 – 6.01 ಟಿಎಂಸಿ

ಡ್ಯಾಂ – ಭದ್ರಾ
ಸಾಮರ್ಥ್ಯ – 71.54 ಟಿಎಂಸಿ
2023 – 25.18 ಟಿಎಂಸಿ
2022 -34.78 ಟಿಎಂಸಿ


ಡ್ಯಾಂ – ನಾರಾಯಣಪುರ
ಸಾಮರ್ಥ್ಯ – 33.31 ಟಿಎಂಸಿ
2023 – 15.51 ಟಿಎಂಸಿ
2022 -26.31 ಟಿಎಂಸಿ

ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.