ಕಾಂಗ್ರೆಸ್ ಹೀನಾಯ ಸೋಲು ಕಂಡ್ರೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಯತ್ನ- ಬಿಎಸ್‍ವೈ

ಬೆಂಗಳೂರು: ತಮ್ಮ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ದಯನೀಯ ಸೋಲನ್ನು ಅನುಭವಿಸಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಕಡೆಗೆ ಜನ ಓಗೊಟ್ಟಿದ್ದಾರೆ. ರಾಜ್ಯದ ಮತದಾರ ಬದಲಾವಣೆಗೆ ತನ್ನ ಜನಾದೇಶವನ್ನು ನೀಡಿದ್ದಾರೆ ಅಂತ ಹೇಳಿದ್ರು.

ಕಾಂಗ್ರೆಸ್ ಕುತಂತ್ರಗಳನ್ನು ಮಾಡುತ್ತಿದೆ. ಇವುಗಳನ್ನು ತೀವ್ರವಾಗಿ ನಾವು ಖಂಡಿಸುತ್ತೇವೆ. ರಾಷ್ಟ್ರೀಯ ನಾಯಕರುಗಳ ಜೊತೆ ಸಮಾಲೋಚನೆಯನ್ನು ಮಾಡಿ ನಮ್ಮ ಮುಂದಿನ ನಿಲುವು ಏನಿರಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ. ಹಗಲು-ರಾತ್ರಿ ಎನ್ನದೇ ದುಡಿದ ಲಕ್ಷಾಂತರ ಜನ ನಮ್ಮ ಕಾರ್ಯಕರ್ತ ಹಾಗೂ ರಾಜ್ಯದ ಮತದಾರರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ರು.

ಕಾಂಗ್ರೆಸ್ ವಿರೋಧ ಅಲೆಯಿಂದಾಗಿ ಜೆಡಿಎಸ್ ಗಣನೀಯ ಪ್ರಮಾಣದಲ್ಲಿ ತನ್ನ ಸ್ಥಾನಗಳನ್ನು ಗಳಿಸಿದೆ. ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ರಾಜ್ಯದ ಆರೂವರೆ ಕೋಟಿ ಜನ ಬಿಜೆಪಿಗೆ ಕೊಟ್ಟಿರುವಂತಹ ಬೆಂಬಲಕ್ಕಾಗಿ ತಲೆಬಾಗಿ ವಂದಿಸುತ್ತೇನೆ ಅಂದ್ರು.

ಕಾಂಗ್ರೆಸ್ ದಯನೀಯ ಸೋಲನ್ನುಭವಿಸದ ಮೇಲೆಯೂ, ತಿಸ್ಕಾರಗೊಂಡ ಬಳಿಕವೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯೋದನ್ನು ಪ್ರಯತ್ನ ಮಾಡಿರುವುದನ್ನು ಬಿಎಸ್‍ವೈ ಮತ್ತೊಮ್ಮೆ ಖಂಡಿಸಿದ್ರು.

Comments

Leave a Reply

Your email address will not be published. Required fields are marked *