ಬಾದಾಮಿಯಿಂದ ಕಣಕ್ಕೆ ಇಳಿಯುತ್ತಿರೋದು ಯಾಕೆ: ರಿವೀಲ್ ಮಾಡಿದ್ರು ಸಿಎಂ

ಮೈಸೂರು: ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಒತ್ತಡ ಇತ್ತು. ಈ ಕಾರಣಕ್ಕೆ ನಾನು ಬಾದಾಮಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹಿಂದೆ ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಇಷ್ಟೊಂದು ಒತ್ತಾಯ ಕೇಳಿಬಂದಿರಲ್ಲ. ಆದರೆ ಆರ್.ಬಿ. ತಿಮ್ಮಾಪುರ, ಎಸ್.ಆರ್. ಪಾಟೀಲ್ ಎರಡು ದಿನ ಮೈಸೂರಿನಲ್ಲಿ ಉಳಿದುಕೊಂಡು ಒತ್ತಾಯ ಮಾಡಿದ್ದಾರೆ ಈ ಕಾರಣಕ್ಕಾಗಿ ನಾನು ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗುತ್ತಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಹಾಗಾದ್ರೆ ಸೋಲಿನ ಭಯದಿಂದ ಕುಮಾರಸ್ವಾಮಿ ಎರಡು ಕಡೆ ನಿಲ್ಲುತ್ತಿದ್ದಾರಾ? ಮೋದಿ ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧೆ ಮಾಡಿದ್ರಾ? ಜೆಡಿಎಸ್‍ನವರಂತೆ ನಾನು ಕೀಳು ಮಟ್ಟದ ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಾದಾಮಿಯಲ್ಲಿ ಯಾರೇ ಸ್ಪರ್ಧಿಸಲಿ ನನಗೆ ಯಾವ ಭಯವಿಲ್ಲ. ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಪ್ರಭಾವ ಬೀರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರ ಮತ ಹಾಕಲು ತೀರ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಒಂದು ದಿನವಲ್ಲ, ಎಲ್ಲಾ ದಿನ ಇಲ್ಲೇ ಪ್ರಚಾರ ಮಾಡಿದರೂ ನಾನೇ ಗೆಲ್ಲುತ್ತೇನೆ ಎಂದು ಸಿಎಂ ಹೇಳಿದರು.

Comments

Leave a Reply

Your email address will not be published. Required fields are marked *