ಬಿಎಸ್‌ವೈ ನಿವಾಸದಲ್ಲಿ ನಾಯಕರ ಸಭೆ – ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು (Exit Polls) ಅತಂತ್ರ ಎಂದು ಭವಿಷ್ಯ ನುಡಿದಿದ್ದರೂ ಬಿಜೆಪಿ (BJP) ನಾಯಕರು ನಮಗೆ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಮತದಾನದ (Election) ಮುನ್ನಾ ದಿನವಾದ ಇಂದು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆಯಿತು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ(Yediyurappa) ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ.

ಸಿಎಂ ಬೊಮ್ಮಾಯಿ, ಸಚಿವರಾದ ಕಾರಜೋಳ, ಮುರುಗೇಶ ನಿರಾಣಿ, ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿ ಹಲವರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

 

ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಾದರೆ ಮುಂದೇನು ಮಾಡಬೇಕು? ಕಾಂಗ್ರೆಸ್ (Congress) ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆದ್ರೆ ಏನ್ ಮಾಡ್ಬೇಕು? ಸಮ್ಮಿಶ್ರ ಸನ್ನಿವೇಶ ಸೃಷ್ಟಿಯಾದರೆ ಯಾವ ಸೂತ್ರ ಅನುಸರಿಸಬೇಕು ಎಂಬ ಚರ್ಚೆಗಳು ನಡೆದಿವೆ. ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್‌ ಮಾಡಿ: ಕರ್ನಾಟಕ ಚುನಾವಣಾ ಫಲಿತಾಂಶ

ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿ, ಸಮೀಕ್ಷೆಗಳು ಏನೇ ಹೇಳಿದರೂ ನಮಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಂಡ್ ರಿಪೋರ್ಟ್ ಕೂಡ ಇದನ್ನೇ ಹೇಳುತ್ತಿವೆ. ಕಾಂಗ್ರೆಸ್‍ಗೆ ಬಹುಮತ ಬರುವುದಿಲ್ಲ. ಅದಕ್ಕೆ ಬೇರೆ ಪಕ್ಷದವರ ಜೊತೆ ಮಾತನಾಡುತ್ತಿದ್ದಾರೆ. ಅವರ ಪಕ್ಷದವರ ಮೇಲೆ ಅವರಿಗೆ ನಂಬಿಕೆ ಇಲ್ಲ ನೋಡಿ ಛೇಡಿಸಿದರು. ಬಿಜೆಪಿ ಹೈಕಮಾಂಡ್‌ ಫಲಿತಾಂಶ ಬರುವರೆಗೆ ಕಾದು ನೋಡೋಣ, ಟೆನ್ಶನ್‌ ಮಾಡಿಕೊಳ್ಳಬೇಡಿ ಎಂಬ ಸೂಚನೆಯನ್ನು ನೀಡಿದೆ.  ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ ತಂತ್ರ

 

ಬಿಜೆಪಿಯ ಪ್ಲಾನ್ ಎ ಏನು?
ಬಹುಮತದ ಸನಿಹಕ್ಕೆ ಬಂದರೆ ಪಕ್ಷೇತರರನ್ನು ಸೆಳೆದು ಮ್ಯಾಜಿಕ್‌ ಸಂಖ್ಯೆ 113 ತಲುಪಲು ಪ್ಲಾನ್‌ ಮಾಡುವುದು. ಇದನ್ನೂ ಓದಿ: ಸೋಲು-ಗೆಲುವಿನ ಲೆಕ್ಕಾಚಾರ; ‘ಚೊಂಬೇಶ್ವರ’ ಅಂತ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು

ಬಿಜೆಪಿಯ ಪ್ಲಾನ್ ಬಿ ಏನು?
ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅಲ್ಪ ವ್ಯತ್ಯಾಸವಿದ್ದಲ್ಲಿ ಸರ್ಕಾರ ರಚನೆ ಕಸರತ್ತು ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯುವುದು ಮೊದಲ ಆದ್ಯತೆ. ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಬೇಕಾ? ಬೇಡವೇ ಎಂಬುದು ಹೈಕಮಾಂಡ್‌ ನಿರ್ಧಾರದ ಮೇಲೆ ಅಂತಿಮವಾಗಲಿದೆ.