ರಾಜ್ಯ ಕಾಂಗ್ರೆಸ್‍ನಿಂದ ಹನುಮಾನ್ ದೇವರಿಗೆ ವಿಶೇಷ ಪೂಜೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Result 2023) ಯಲ್ಲಿ ಕಾಂಗ್ರೆಸ್ ಜಯಬೇರಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‍ನಿಂದ ಹನುಮಾನ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜನತೆಯ ಒಳಿಗಾಗಿ ಪ್ಯಾಲೇಸ್ ರಸ್ತೆಯ ಬಾಲಬೃಹಿ ಬಳಿ ಇರುವ ಹನುಮಾನ್ (Hanuman) ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಜೈ ಭಜರಂಗ ಬಲಿ ಅಂತಾ ಘೋಷಣೆ ಕೂಗುತ್ತಾ ಕಾಂಗ್ರೆಸ್‍ (Congress) ಗೆ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ರಸ್ತೆಗೆ ಸಗಣಿ ನೀರು ಹಾಕಿ ಸ್ವಚ್ಛ

ದೇವಸ್ಥಾನದ ಮುಂಭಾಗ ಗ್ಯಾಸ್ ಸಿಲಿಂಡರ್ (Gas Cylinder) ಜೋಡಿಸಿ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗ್ಯಾಸ್ ಸಿಲಿಂಡರ್ ಗೆ ಪೂಜೆ ಮಾಡಿದ್ದಾರೆ. ಗ್ಯಾಸ್ ರೇಟ್ ಜಾಸ್ತಿ ವಿರುದ್ಧ ಹೋರಾಟ ಮಾಡ್ತಾನೆ ಬರ್ತಿರೋ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಗೆದ್ದ ಮೇಲೂ ಬಿಡದೇ ಗ್ಯಾಸ್ ಸಿಲಿಂಡರ್ ಗೆ ಪೂಜೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉರುಳು ಸೇವೆಯನ್ನೂ ಮಾಡಿದ್ದಾರೆ.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ಸ್ಪಷ್ಟ ಬಹುಮತ ಬಂದ ಹಿನ್ನಲೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಪ್ರಧಾನಿ ಮೋದಿ ಭಜರಂಗಬಲಿ ಘೋಷಣೆ ಕೂಗಿದ್ರು. ನಾವು ರಾಜಕೀಯಕ್ಕೆ ದೇವರ ಹೆಸರು ಬಳಸಲ್ಲ. ನಾವು ದೇವರ ಹೆಸರು ದುರ್ಬಳಕೆ ಮಾಡಲ್ಲ. ಚುನಾವಣೆಗೆ ಮೊದಲೂ ನೆನೆಸಿಕೊಂಡಿದ್ದೆವು, ಈಗಲೂ ನೆನೆಸಿಕೊಳ್ತಿದ್ದೇವೆ. ಬಿಜೆಪಿ ತರಹ ಮರೆಯುವವರು ನಾವಲ್ಲ ಎಂದು ತಿಳಿಸಿದ್ದಾರೆ.