ಕಾಂಗ್ರೆಸ್‍ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು: ನರೇಂದ್ರ ಮೋದಿ

ತುಮಕೂರು: ಕಾಂಗ್ರೆಸ್ (Congress) ಕಾಲದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿತ್ತು. ಅವರ ಕಾಲದಲ್ಲಿ ಎಲ್ಲವೂ ಲೂಟಿ ಆಗಿತ್ತು. ಅವರದ್ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು. ಎಚ್‍ಎಎಲ್ (HAL) ನಿರ್ನಾಮ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಎಚ್‍ಎಎಲ್ ಹೆಸರು ಬರುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಧುನಿಕ ರಕ್ಷಣಾ ವ್ಯವಸ್ಥೆ ಒದಗಿಸಿದೆ. ಕಾಂಗ್ರೆಸ್‌ (Congress) – ಜೆಡಿಎಸ್ (JDS) ಹಲವು ಕಾಮಗಾರಿ ನಿಲ್ಲಿಸಲು ಪ್ರಯತ್ನಿಸಿತ್ತು. ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಕಾಮಗಾರಿ ಮಾಡಿದೆ. ಕಾಂಗ್ರೆಸ್ ನ ಮಾಜಿ ಪ್ರಧಾನಿ 85 ಪರ್ಸೆಂಟ್ ಬಗ್ಗೆ ಒಪ್ಪಿಕೊಂಡಿದ್ದರು. ಜೆಡಿಎಸ್ ನ ಎಲ್ಲಾ ಅಭ್ಯರ್ಥಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿರುತ್ತಾರೆ. ಕರ್ನಾಟಕವನ್ನು ನಂಬರ್ ಒನ್ ಮಾಡಲು ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಮಾಡಲು ಸಂಕಲ್ಪ ಮಾಡಿ. ಬುಧವಾರ ಮತದಾನ ಇದೆ. ನಾವು ವಿಜಯ ಸಂಕಲ್ಪ ಮಾಡಬೇಕು. ಚುನಾವಣೆ ಗೆಲ್ಲುವುದು ನಿಶ್ಚಿತ. ಆದರೆ ಬೂತ್ ಬೂತ್ ನಲ್ಲಿ ಲೀಡ್ ಬರಬೇಕು. ಮನೆ ಮನೆಗೆ ಹೋಗಿ ಹೇಳಿ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಜನರ ಜೀವನ ಸುಧಾರಿಸಿದೆ. ಕಿಸಾನ್ ಸಮ್ಮಾನ್ (Kisan Samman) ಯೋಜನೆಯಿಂದ ರೈತರ ಬದುಕು ಹಸನಾಗಿದೆ. 2.5 ಲಕ್ಷ ಕೋಟಿ ರೈತರಿಗೆ ತಲುಪಿದೆ. ಇಂದು ದೇಶದ ಹಳ್ಳಿಗಳಲ್ಲಿ ದವಸ ಧಾನ್ಯಗಳ ಸ್ಟೋರೇಜ್ ಸೌಲಭ್ಯ ಮಾಡಲಾಗಿದೆ. ರೈತರ ರಸಗೊಬ್ಬರದ ದರ ಕಡಿಮೆ ಮಾಡಲಾಗಿದೆ. 50 ರೂ.ಗೆ ರಸಗೊಬ್ಬರ ಖರೀದಿ ಮಾಡಿ ರೈತರಿಗೆ ಕಡಿಮೆ ಬೆಲೆಗೆ ಕೊಡಲಾಗುತ್ತದೆ ಎಂದು ಹೇಳಿದರು.

ದೇಶದ ಹಳ್ಳಿಹಳ್ಳಿಗೂ ವಿದ್ಯುತ್ ತಲುಪಿದೆ. 2014ರ ಮುಂಚೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ತಲುಪಿದೆ. ಈಗ ನಲ್ಲಿ ಮೂಲಕ ಶುದ್ಧ ನೀರು ಸಿಗುತ್ತದೆ. ತುಮಕೂರಿನಲ್ಲಿ 1.5 ಲಕ್ಷ ಕುಟುಂಬಕ್ಕೆ ಜಲಜೀವನ್ ಮಿಷನ್ ಮೂಲಕ ನೀರು ಸಿಗುತ್ತಿದೆ. ಫುಡ್ ಪಾರ್ಕ್ ಮೂಲಕ ರೈತರಿಗೆ ಅನುಕೂಲ ಆಗಿದೆ. ಉದ್ಯೋಗ ಸಿಕ್ಕಿದೆ ಎಂದರು. ಇದನ್ನೂ ಓದಿ: ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆಯಾಚಿಸಿದ ಸುಮಲತಾ

ಕೊಬ್ಬರಿಗೆ ಬೆಂಬಲ ಬೆಲೆ ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್‍ನವರು ಯಾವುದನ್ನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಈ ಎಲ್ಲಾ ಯೋಜನೆ ಸತ್ತುಹೋಗುತ್ತದೆ. ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಆಗುತ್ತದೆ. ಈ ಬಾರಿಯ ಕೇಂದ್ರ ದ ಬಜೆಟ್ ನಲ್ಲಿ ಅಪ್ಪರ್ ಭದ್ರಾಗೆ 5 ಸಾವಿರ ಕೋಟಿ ರೂ ಅನುದಾನ ಕೊಡಲಾಗಿದೆ. ಮನೆ ಮನೆಗೆ ನೀರು ತಲುಪಿಸಲು ಬದ್ಧತೆ ಇದೆ ಎಂದು ಹೇಳಿದರು.

ಈ ದೇಶದ ಪ್ರಾದೇಶಿಕ ಭಾಷೆ ಮೂಲಕ ಮಾತೃಭಾಷೆ ಮೂಲಕ ಎಲ್ಲಿ ತನಕ ಓದಲು ಬಯಸುತ್ತಾರೋ ಅಲ್ಲಿ ತನಕ ಓದಬಹುದು. ಕಾಂಗ್ರೆಸ್‍ನವರು ಇಂತಹ ಎನ್‍ಇಪಿಗೆ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರಿಗೆ ಇಂಗ್ಲಿಷ್ ಮೇಲೆ ಪ್ರೀತಿ. ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ತಾನೇ ಆದರೆ ಕಾಂಗ್ರೆಸ್ ನವರು ಇದರ ವಿರುದ್ಧ ಇದೆ. ಇಂತಹ ಕಾಂಗ್ರೆಸ್ ಗೆ ಶಿಕ್ಷೆ ಕೊಡುವ ಚುನಾವಣೆ ಇದಾಗಿದೆ. ಹಲವು ಕೇಂದ್ರದ ಪರೀಕ್ಷೆಗಳು ಈಗ ಕನ್ನಡದಲ್ಲಿ ನಡೀತಿದೆ. ಕಾಂಗ್ರೆಸ್ ಕರ್ನಾಟಕದ ಯುವಕರಿಗೆ ಮೋಸ ಮಾಡುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಶೈಕ್ಷಣಿಕವಾಗಿಯೂ ಒಳ್ಳೆ ಕೆಲಸ ಮಾಡುತ್ತಿದೆ. ಆಧುನಿಕ ನೂತನ ಶೈಕ್ಷಣಿಕ ನೀತಿ ತಂದಿದೆ. ಏಷ್ಯಾದ ದೊಡ್ಡ ಹೆಲಿಕಾಪ್ಟರ್ ಘಟಕ ಇದೆ. ಇದರ ಶಿಲಾನ್ಯಾಸ ಮತ್ತು ಉದ್ಘಾಟನಾ ಸೌಭಾಗ್ಯ ನೀವು ಕೊಟ್ಟಿದ್ದೀರಿ ಎಂದು ತಿಳಿಸಿದರು.