ಬಿಜೆಪಿ ನಾಯಕರ ವಿರುದ್ಧ ಸೋಮಣ್ಣ ಚಾರ್ಜ್‌ಶೀಟ್‌- ಇತ್ಯರ್ಥ ಮಾಡ್ತೀವಿ ಎಂದ ಶಾ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ (Karnataka BJP Leaders) ವಿರುದ್ಧ ಮುನಿಸಿಕೊಂಡಿರುವ ವಸತಿ ಸಚಿತ ಸೋಮಣ್ಣ (Somanna) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿ ದೂರಿನ ಸುರಿಮಳೆ ಸುರಿದ್ದಾರೆ.

ಬುಧವಾರ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಯಡಿಯೂರಪ್ಪ, ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಪ್ರಸ್ತಾಪ ಮಾಡಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ದೂರು ಆಲಿಸಿದ ಅಮಿತ್‌ ಶಾ ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ

ಸೋಮಣ್ಣ ಚಾರ್ಜ್‌ಶೀಟ್‌ ಏನು?
ಲಿಂಗಾಯತ ನಾಯಕನಾಗಿ (Lingayat Leader) ನನ್ನ ರಾಜಕೀಯ ಏಳಿಗೆಯಾಗುವುದನ್ನು ಸಹಿಸುತ್ತಿಲ್ಲ. ಪುತ್ರನ ಮೇಲಿನ ಪ್ರೀತಿಯಲ್ಲಿ ನಾವು ಬೆಳೆಯಲು ಅವಕಾಶ ಕೊಡುತ್ತಿಲ್ಲ. ನನಗೆ ಪಕ್ಷದಲ್ಲಿ ಸಾಕಾಗಿದ್ದು ನಾನು ರಾಜೀನಾಮೆ ನೀಡುತ್ತೇನೆ.

ನನಗೆ ಒಳ್ಳೆಯ ಖಾತೆಯೂ ಇಲ್ಲ, ಜಿಲ್ಲಾ ಉಸ್ತುವಾರಿಯೂ ಇಲ್ಲ. ನನ್ನ 15 ವರ್ಷಗಳಿಂದ ಜಿಲ್ಲಾ ರಾಜಕಾರಣಕ್ಕೆ ಹೋಗಲು ಮನವಿ ಮಾಡುತ್ತಿದ್ದೇನೆ. ತುಮಕೂರು ಅಥವಾ ಚಾಮರಾಜನಗರಕ್ಕೆ ಹೋಗಲು ಬಿಡುತ್ತಿಲ್ಲ. ರಾಜಕೀಯವಾಗಿ ಮಾನ್ಯತೆ ಇಲ್ಲ, ಸೋಲಿಸುವ ಹುನ್ನಾರ ನಡೆಯುತ್ತಿದೆ. ನನ್ನ ಮಗನ ರಾಜಕೀಯ ಬೆಳವಣಿಗೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *