ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ

ಚಿತ್ರದುರ್ಗ: ನಮ್ಮ ಹೆಣ್ಮಕ್ಕಳು ಧರಿಸುವ ಹಿಜಬ್ (Hijab) ಹಾಗೂ ಅಜಾನ್ (Azan) ವಿಚಾರದಲ್ಲಿ ‌ಸರ್ಕಾರಕ್ಕೆ ನಮ್ಮ ತಲೆ ಕೊಟ್ಟೆವು. ಆದರೆ ಮೀಸಲಾತಿ (Reservation) ವಿಚಾರದಲ್ಲಿ ಜೈಲಿಗೆ ಹೋದರೂ ಚಿಂತೆಯಿಲ್ಲವೆಂದು ಎಸ್‌ಡಿಪಿಐ (SDPI) ಕಾರ್ಯದರ್ಶಿ ಜಾಕೀರ್ ಹುಸೇನ್ ಎಚ್ಚರಿಕೆ ನೀಡಿದರು.

ಚಿತ್ರದುರ್ಗ (Chitradurga) ನಗರದ ಒನಕೆ ಓಬವ್ವ ವೃತ್ತದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‌ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ‌ ರದ್ದುಗೊಳಿಸಿದ್ದಕ್ಕೆ ಬಿಜೆಪಿ (BJP) ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿದರು. ಬೊಮ್ಮಯಿ ನೇತೃತ್ವದ ಈ ಬಿಜೆಪಿ ಸರ್ಕಾರ ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಂಡಿದೆ. ನಮ್ಮ ಹಕ್ಕು ನಮಗೆ ವಾಪಸ್ ಕೊಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಿವುದಾಗಿ ಕಿಡಿಕಾರಿದರು. ಇದನ್ನೂ ಓದಿ: ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

ನಾವು ಹಿಜಬ್ ಸೇರಿದಂತೆ ಅಜಾನ್‌ಗೆ ನಾವು ತಲೆ‌‌ ಕೊಟ್ಟೆವು. ಆದರೆ ಮೀಸಲಾತಿ ವಿಚಾರದಲ್ಲಿ ತಲೆ‌ ಹೋದರೂ ಚಿಂತೆಯಿಲ್ಲ, ಜೈಲಿಗೆ ಹೋದರು ಚಿಂತೆಯಿಲ್ಲ. ನಾವೆಲ್ಲ ಉಗ್ರ ಹೋರಾಟ ಮಾಡುತ್ತೇವೆಂದು ಜಾಕೀರ್ ಹುಸೇನ್ ಸರ್ಕಾರಕ್ಕೆ ಎಚ್ಚರಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ‌ ಬಾಳೇಕಾಯಿ ಶ್ರೀನಿವಾಸ್ ಸೇರಿದಂತೆ ಎಸ್‌ಡಿಪಿಐ ಕಾರ್ಯಕರ್ತರು ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೇಳದಿದ್ರೆ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್