ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

ಬೆಂಗಳೂರು: ಪ್ರಧಾನಿ ಮೋದಿ (PM Narendra Modi) ರೋಡ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕದಲ್ಲೂ (Karnataka) ಗುಜರಾತ್ ಮಾಡೆಲ್ ಸ್ಟ್ರಾಟರ್ಜಿ ಶುರುವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗುಜರಾತ್‍ನ ಅಹಮದಾಬಾದ್ (Gujarat Ahmedabad) ತಂತ್ರಕ್ಕೆ ಬಿಜೆಪಿ (BJP) ಮೊರೆ ಹೋಗಿದೆ. ಅಹಮದಾಬಾದ್‍ನಲ್ಲಿ ಆಯೋಜಿಸಿದ್ದ ಬಿಗ್ ರೋಡ್ ಶೋ ಈಗ ಬೆಂಗಳೂರಿನಲ್ಲಿ (Bengaluru) ಮಾಡಲಾಗುತ್ತಿದೆ.

 

ಕಳೆದ ಡಿಸೆಂಬರ್ 1ರಂದು ಅಹಮದಾಬಾದ್‌ನ 13 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೋದಿ ಒಟ್ಟು 50 ಕಿ.ಮೀ ಮೆಗಾ ರೋಡ್‌ ಶೋ ನಡೆಸಿದ್ದರು. ಅಹಮದಾಬಾದ್ ರೋಡ್ ಶೋದಿಂದ ಬಿಜೆಪಿಗೆ ಭರ್ಜರಿ ಲಾಭ ಸಿಕ್ಕಿದ ಬೆನ್ನಲ್ಲೇ ಬೆಂಗಳೂರಲ್ಲೂ ಈಗ ಅದೇ ಮಾದರಿಯ ಮೆಗಾ ರೋಡ್ ಶೋ ನಡೆಯಲಿದೆ. ಈ ಮೂಲಕ ಈ ಸಲ 15 ಹಾಲಿ ಸೀಟ್‍ಗಳಿಂದ 20ಕ್ಕೆ ಏರಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

ಬೆಂಗಳೂರಿನಲ್ಲಿ ಅಹಮದಾಬಾದ್ ತಂತ್ರ
ಮೇ. 6 ರಂದು ಒಂದೇ ದಿನ ಎರಡು ಹಂತದಲ್ಲಿ ರೋಡ್ ಶೋ ನಡೆಯಲಿದೆ. ಬೆಳಗ್ಗೆ 8 ಕಿ.ಮೀ, ಮಧ್ಯಾಹ್ನ 29.4 ಕಿ.ಮೀ ರೋಡ್ ಶೋಗೆ ರೂಟ್‍ಮ್ಯಾಪ್ ಸಿದ್ಧಪಡಿಸಲಾಗಿದೆ. ಇಲ್ಲೂ ಸುಮಾರು 13 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಮೆಗಾ ರೋಡ್ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

ಗುಜರಾತ್ ರೀತಿ ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಮೋದಿ ಈ ತಂತ್ರ ಪ್ರಯೋಗ ಮಾಡಿದ್ದರು. ರಾಜಧಾನಿಯಲ್ಲಿ ಮೋದಿಯವರ ವರ್ಚಸ್ಸೇ ಬಿಜೆಪಿಯ ಗೆಲುವಿನ ಸೂತ್ರವಾಗಿದ್ದು ನಮೋ ಮೂಲಕವೇ ಮತ ಬೇಟೆ ನಡೆಸಲು ಬಿಜೆಪಿ ಮುಂದಾಗಿದೆ.