ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

ಬೆಂಗಳೂರು: ಮನೆ ಬಾಗಿಲಿಗೆ ಮೋದಿ ಪರಿಕಲ್ಪನೆಯ ಅಡಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ರೋಡ್‌ ಶೋ (Road Show) ಆಯೋಜನೆಗೊಂಡಿದೆ.

ಬೆಂಗಳೂರು ರೋಡ್ ಶೋನಲ್ಲಿ ಕೇಂದ್ರ ಸರ್ಕಾರದ ಸಾಧನೆ ಹಾಗೂ ಬೆಂಗಳೂರಿಗೆ (Bengaluru) ಸರ್ಕಾರ ನೀಡಿದ ಕೊಡುಗೆಗಳ ಫ್ಲೆಕ್ಸ್‌ ಅಳವಡಿಸಲಾಗಿದೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

 

ನಾಯಕರಿಗೆ ಸ್ವಾಗತ ಕೋರಿ ಫ್ಲೆಕ್ಸ್‌ ಹಾಕುವುದು ಸಾಮಾನ್ಯ. ಆದರೆ ಈ ರೋಡ್‌ ಶೋನಲ್ಲಿ ಮೋದಿಗೆ ಸ್ವಾಗತ ಕೋರುವ ಬದಲಾಗಿ  ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯ ಫ್ಲೆಕ್ಸ್‌ ಅಳವಡಿಸಿ ಮತ ಬೇಟೆಗೆ ಬಿಜೆಪಿ ಮುಂದಾಗಿದೆ. ಮೋದಿ ರೋಡ್‌ ಶೋ ನಡೆಸುವ ರಸ್ತೆಯುದ್ಧಕ್ಕೂ ಬೆಂಗಳೂರಿಗೆ ನೀಡಿದ ಕೊಡುಗೆಗಳ ವಿವರ ಇರುವ ಫ್ಲೆಕ್ಸ್‌ ಹಾಕಲಾಗಿದೆ.

ಶನಿವಾರ ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 12:30 ಗಂಟೆಯವರೆಗೆ 26.5 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ.