ಶಾಸಕಿ ಸೌಮ್ಯಾ ರೆಡ್ಡಿ ಕಾರು ಸೀಜ್

ಬೆಂಗಳೂರು: ಹಾಲಿ ಜಯನಗರ ವಿಧಾಸಭೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ (Sowmya Reddy) ಕಾರನ್ನು ಸೀಜ್ ಮಾಡಲಾಗಿದೆ.

ಶಾಸಕಿ ಸೌಮ್ಯ ರೆಡ್ಡಿಗೆ ಸೇರಿದ ಇನ್ನೋವಾ ಕಾರನ್ನು ಪ್ಲೇಯಿಂಗ್ ಸ್ಕ್ವಾಡ್ ಹಾಗೂ ತಿಲಕ ನಗರ ಪೊಲೀಸರು ಸೀಜ್ (Sowmya Reddy Car Seize) ಮಾಡಿದ್ದಾರೆ.

ತಿಲಕ ನಗರ ಪೊಲೀಸ್ ಠಾಣೆ ಮುಂಭಾಗ ಚೆಕ್ ಪೋಸ್ಟ್ ನಲ್ಲಿ ಕಾರು ಪರಿಶೀಲನೆ ಮಾಡುವಾಗ ಕಾರಿನಲ್ಲಿ ಚುನಾವಣೆ ಸಂಬಂಧ ವಸ್ತುಗಳು ಸಿಕ್ಕಿವೆ.  ಇದನ್ನೂ ಓದಿ: ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್‌ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್

23 ಸೀರೆ , 32 ಬ್ಲೌಸ್ ಪೀಸ್‌, ಸಾಮ್ ಸಂಗ್, ನೋಕಿಯಾ  ಆಂಡ್ರೈಡ್ ಮೊಬೈಲ್ , 16 ಶಾಲು, 150 ಪ್ರೋಗ್ರೆಸ್ ರಿಪೋರ್ಟ್ ಇರೋ ಬುಕ್ ಲೆಟ್ಸ್ ಸಿಕ್ಕಿರುವ ಬಗ್ಗೆ ಮಾಹಿತಿ ಲಭಿಸಿದೆ.

ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ. ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ತಿಳಿಸಿದ್ದಾರೆ.