ಜಸ್ಟ್‌ ಒಂದು ಕರೆಯಿಂದ ಟಿಕೆಟ್‌ ಕಳೆದುಕೊಂಡ ಮೊಯಿದ್ದಿನ್ ಬಾವಾ!

ಬೆಂಗಳೂರು: ಬೇರೆ ಪಕ್ಷದ ನಾಯಕರ ಮೂಲಕ ಒತ್ತಡ ತಂದ ಕಾಂಗ್ರೆಸ್‌ ನಾಯಕ ಮೊಯಿದ್ದಿನ್ ಬಾವಾ(Mohiuddin Bava) ಕಡೆ ಗಳಿಗೆಯಲ್ಲಿ ಟಿಕೆಟ್‌ ಕಳೆದುಕೊಂಡಿದ್ದಾರೆ.

ಸಿದ್ದರಾಮಯ್ಯ (Siddaramaiah) ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್‌ (DK Shivakumar) ಬಣದ ಇನಾಯತ್ ಅಲಿ (Inayat Ali) ಮಧ್ಯೆ ಮಂಗಳೂರು ಉತ್ತರ (Mangalore North) ಕ್ಷೇತ್ರದ ಟಿಕೆಟ್‌ಗೆ ಭಾರೀ ಫೈಟ್‌ ನಡೆಯುತ್ತಿತ್ತು.

ಬಹುತೇಕ ಮಾಜಿ‌ ಶಾಸಕ‌ ಮೊಯಿದ್ದಿನ್ ಬಾವಾಗೆ ಟಿಕೆಟ್ ಫೈನಲ್ ಆಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲೇ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಪಟ್ಟಿ ಬಿಡುಗಡೆಗೆ ಮುನ್ನ ಅನ್ಯ ಪಕ್ಷವೊಂದರ ಪ್ರಭಾವಿ ನಾಯಕರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (Mallikarjun kharge) ಮೊಯಿದ್ದಿನ್ ಬಾವಾ ಕರೆ ಮಾಡಿಸಿದ್ದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!

ಬೇರೆ ಪಕ್ಷದ ಪ್ರಭಾವಿ ನಾಯಕ ಖರ್ಗೆಗೆ ಕರೆ ಮಾಡಿ ಬಾವಾಗೆ ಟಿಕೆಟ್‌ ಕೊಡಿ, ಗೆಲ್ಲುವ ಅವಕಾಶ ಜಾಸ್ತಿ ಇದೆ ಎಂದು ಬ್ಯಾಟ್‌ ಬೀಸಿದ್ದರು. ತಮ್ಮ ಪಕ್ಷದ ಟಿಕೆಟ್‌ ಯಾರಿಗೆ ಕೊಡಬೇಕು? ಕೊಡಬಾರದು ಎನ್ನುವುದನ್ನು ನಾವು ನಿರ್ಧಾರ ಮಾಡುತ್ತೇವೆ. ಬೇರೆ ವ್ಯಕ್ತಿ ಕರೆ ಮಾಡಿ ಲಾಬಿ ಮಾಡುವುದು ಅಂದರೆ ಏನು ಅರ್ಥ ಎಂದು ಸಿಟ್ಟಾದ ಖರ್ಗೆ ಬಾವಾಗೆ ಯಾವುದೇ ಕಾರಣಕ್ಕೂ ಈ ಬಾರಿ ಟಿಕೆಟ್‌ ಕೊಡಲೇಬಾರದು ಎಂದು ಹಠಕ್ಕೆ ಬಿದ್ದಿದ್ದರು.

ಮಲ್ಲಿಕಾರ್ಜುನ ಖರ್ಗೆ ಹಠಕ್ಕೆ ಬಿದ ಪರಿಣಾಮ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಡಿಕೆ ಬಣದ ಇನಾಯತ್ ಅಲಿಗೆ ಸಿಕ್ಕಿದೆ. ಒಂದು ಕರೆಯಿಂದ  ಮೊಯಿದ್ದಿನ್ ಬಾವಾ ಟಿಕೆಟ್‌ ಕಳೆದುಕೊಂಡಿದ್ದಾರೆ.