ವಿನಾಶದ ಅಂಚಿನಲ್ಲಿ ಕಾಂಗ್ರೆಸ್ – ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್

– ಕಾಂಗ್ರೆಸ್ ಏನೇ ಗ್ಯಾರಂಟಿ ನೀಡಿದರೂ ಜನ ನಂಬಲ್ಲ

ಬಾಗಲಕೋಟೆ: ದೇಶದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರು ಎಷ್ಟೇ ಚುನಾವಣಾ ಪ್ರಚಾರ ಮಾಡಿದರೂ ಪೂರ್ತಿಯಾಗಿ ಕಾಂಗ್ರೆಸ್ (Congress) ಪಕ್ಷ ವಿನಾಶ ಹೊಂದುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಏನೇ ಮಾಡಿದರೂ ಏನೇ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದರೂ ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು.

ಬಾಗಲಕೋಟೆ (Bagalkote) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಚುನಾವಣೆಯ ನೇತೃತ್ವವನ್ನು ವಹಿಸಿದ್ದ ಪ್ರಿಯಾಂಕಾ ಗಾಂಧಿ ಜನರಿಗೆ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದ್ದರು. ಉತ್ತರಪ್ರದೇಶದ 403 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದರು. ಇದರಿಂದ ಕಾಂಗ್ರೆಸ್ ಸಾಧನೆ ಎನೆಂದು ತಿಳಿಯುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮುಗಿದುಹೋದ ಅಧ್ಯಾಯವಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ ಪಕ್ಷ ಯಾವುದೇ ಘೋಷಣೆ ಮಾಡಿದರೂ ಅದು ಪೂರ್ಣಗೊಳಿಸುವುದಿಲ್ಲ. ನಾವು ಬಡವರ ಕಲ್ಯಾಣ, ಮಧ್ಯಮ ವರ್ಗಕ್ಕಾಗಿ ಅವರ ಉತ್ತೇಜನಕ್ಕಾಗಿ ಭರವಸೆ ನೀಡುತ್ತೇವೆ. ಈಗ ಅರ್ಧ ಲೀ. ನಂದಿನಿ ಹಾಲು, ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಆದರೆ ಕಾಂಗ್ರೆಸ್ ಘೋಷಣೆಗಳು ಬಜೆಟ್‌ಗೆ ವರ್ಕೌಟ್ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಉತ್ತರಾಖಂಡ, ಗೋವಾ, ಅಸ್ಸಾಂ ಉತ್ತರಪ್ರದೇಶದಲ್ಲಿ ಪ್ರತಿ ರಾಜ್ಯದಲ್ಲೂ ಆಗಿದೆ ಎಂದರು.

ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಬಿಜೆಪಿ ಘೋಷಣೆ ಮಾಡುತ್ತದೆ. ಈ ಸಂಬಂಧ ಬಿಜೆಪಿ ಸರ್ಕಾರ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಜಾರಿಗೆ ಕಟಿಬದ್ಧವಾಗಿದೆ. ಈಗಾಗಲೇ ಉತ್ತರಾಖಂಡದಲ್ಲಿ ಸಮಿತಿ ರಚನೆ ಮಾಡಿದೆ. ಈಗಾಗಲೇ ಕೋಡ್ ರಚನೆ ಪ್ರಕ್ರಿಯೆ ನಡೆದಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ ಅಲ್ಲಿ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲೆಯ 7 ಅಭ್ಯರ್ಥಿಗಳಾದ ಬಾಗಲಕೋಟೆಯ ವೀರಣ್ಣ ಚರಂತಿಮಠ, ಹುನಗುಂದದ ದೊಡ್ಡನಗೌಡ ಪಾಟೀಲ್, ಬೀಳಗಿಯ ಮುರುಗೇಶ್ ನಿರಾಣಿ, ಮುಧೋಳದ ಗೋವಿಂದ ಕಾರಜೋಳ, ಜಮಖಂಡಿ ಜಗದೀಶ್ ಗುಡಗುಂಟಿ, ಬಾದಾಮಿಯ ದೊಡ್ಡನಗೌಡ ಪಾಟೀಲ್, ತೇರದಾಳದ ಸಿದ್ದು ಸವದಿ, ಸಂಸದ ಪಿಸಿ ಗದ್ದಿಗೌಡರ, ವಿಪ ಮಾಜಿ ಸದಸ್ಯ ನಾರಾಯಣ ಸಾ ಬಾಂಢಗೆ ಮತ್ತಿತರರು ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ