ಬೀದರ್: ನಾಳೆ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಕಲ್ಯಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿದ್ದು, ಚುನಾವಣಾ ಚಾಣಕ್ಯನಿಗೆ ನೀಡಲು ವಿಶೇಷವಾದ ಬೆಳ್ಳಿಯ ಗದೆ ಹಾಗೂ ಕಿರೀಟ ಸಿದ್ಧವಾಗಿದೆ.
ಶುಕ್ರವಾರ ಬೀದರ್‌ಗೆ (Bidar) ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ 5 ಕೆಜಿಯ ಆಕರ್ಷಕ ಬೆಳ್ಳಿಯ ಗದೆ ಮತ್ತ ಬೆಳ್ಳಿಯ ಕಿರೀಟಾವನ್ನು ಶಾಗೆ ನೀಡಲು ಬಸವ ಕಲ್ಯಾಣ ಶಾಸಕ ಶರಣು ಸಲಗರ್ ಸಿದ್ಧ ಮಾಡಿಸಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ, ಅಮಿತ್ ಶಾ ಬಳಿಕ ಬೆಳಗಾವಿಗೆ ರಾಜನಾಥ್ ಸಿಂಗ್ ಪ್ರವಾಸ

ನಾಳೆ ವಿಜಯ ಸಂಕಲ್ಪ ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯಾದ ಬೆಳ್ಳಿ ಕಿರೀಟ ತೊಡಿಸಿ ಬೆಳ್ಳಿ ಗದೆ ನೀಡಲಿದ್ದಾರೆ. ಶುಕ್ರವಾರದಿಂದ ಬಸವ ಕಲ್ಯಾಣದಿಂದ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ ಕಲ್ಯಾಣದಿಂದ ಲಿಂಗಾಯತ ಜಪ ಮಾಡಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನತ್ತ ಮುಖ ಮಾಡಿದ ಕೆಆರ್ ಪೇಟೆ ಜೆಡಿಎಸ್ ಭಿನ್ನಮತೀಯರು

Leave a Reply