ಕಾಂಗ್ರೆಸ್‍ಗೆ ಕಗ್ಗಂಟಾದ ಟಿಕೆಟ್ ಆಯ್ಕೆ!

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲ ಉಂಟಾಗಿದೆ.

ಕಳೆದ 3-4 ದಿನಗಳಿಂದ ಮ್ಯಾರಥಾನ್ ಸಭೆ ನಡೆಸುತ್ತಿದ್ದರೂ ಅಭ್ಯರ್ಥಿಗಳ ಆಯ್ಕೆ ಇನ್ನೂ ಕೂಡ ಕಗ್ಗಂಟಾಗೇ ಉಳಿದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಪರಿಣಾಮವಾಗಿ ಸಭೆಗಳ ಮೇಲೆ ಸಭೆ ನಡೆಸಿದ್ರೂ ಕೂಡ ಕಾಂಗ್ರೆಸ್ ಪಟ್ಟಿಗೆ ಅಂಕಿತ ಬಿದ್ದಿಲ್ಲ. ಇದನ್ನೂ ಓದಿ: ಟಿಕೆಟ್ ‘ಕೈ’ ತಪ್ಪಿದ ಹಿನ್ನೆಲೆ – ವಿ.ಆರ್.ಸುದರ್ಶನ್ ರಾಜೀನಾಮೆ

ಈ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಮಧ್ಯಾಹ್ನ 3 ಗಂಟೆ ಒಳಗೆ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋ ಸಾಧ್ಯತೆ ಇದೆ.


ಸ್ಟಾರ್ ಪ್ರಚಾರಕರು: ಇತ್ತ ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧವಾಗಿದೆ. ತೆಲುಗು ಪ್ರಭಾವ ಇರೋ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಬೆಂಗಳೂರಿನ ತಮಿಳು ಭಾಷಿಕರಿರೋ ಪ್ರದೇಶಗಳಲ್ಲಿ ನಟಿ ಖುಷ್ಬೂ, ಸಿಖ್ ಭಾಷಿಕರಿರೋ ಕಡೆ ಪಂಜಾಬ್ ಮಿನಿಸ್ಟರ್ ಕಮ್ ಕ್ರಿಕೆಟರ್ ಸಿಧು ಕ್ಯಾಂಪೇನ್‍ಗೆ ಬರಲಿದ್ದಾರೆ. ಇವರ ಜೊತೆಗೆ, ಜಯಮಾಲ, ಉಮಾಶ್ರೀ, ಮಾಲಾಶ್ರೀ, ರಮ್ಯಾ, ಭಾವನ, ಶಶಿಕುಮಾರ್, ಸಾಧುಕೋಕಿಲ ಅವರ ಹೆಸರನ್ನ ಹೈಕಮಾಂಡ್‍ಗೆ ರವಾನಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *