ಕರ್ನಾಟಕ ಚುನಾವಣೆ 2018- 12 ಮಂದಿ ಹಾಲಿ ಶಾಸಕರಿಗೆ ತಪ್ಪಿತು `ಕೈ’ ಟಿಕೆಟ್

ಬೆಂಗಳೂರು: ಕೊನೆಗೂ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ 218 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.

ಭಾನುವಾರ ರಾತ್ರಿ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಇದರಲ್ಲಿ ಈ ಬಾರಿ ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯುತ್ತಾರೆ. ಈ ಮೂಲಕ ಬಾದಾಮಿ ಸಿಎಂ ಅವರಿಗೆ ಟಿಕೆಟ್ ಕೊಡೋದು ಬೇಡ ಅಂತ ಹೈಕಮಾಂಡ್ ತೀರ್ಮಾನಿಸಿದೆ.

    ಜಗಳೂರು ರಮೇಶ್

ಕೈ ತಪ್ಪಿದ ಹಾಲಿ ಶಾಸಕರು: ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸಲು ಬ್ಯಾಡಗಿಯಿಂದ ಹಾಲಿ ಶಾಸಕ ಬಸವರಾಜ್ ಶಿವಣ್ಣ ಅವರನ್ನು ಕೈ ಬಿಟ್ಟಿದ್ದು, ಎಸ್‍ಆರ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

 ಬ್ಯಾಡಗಿ ಶಿವಣ್ಣ

ಹಾನಗಲ್ ಕ್ಷೇತ್ರದಿಂದ ಹಾಲಿ ಶಾಸಕ ಮನೋಹರ್ ತಹಶೀಲ್ದಾರ್ ಬದಲು ಶ್ರೀನಿವಾಸ್ ಮಾನೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇನ್ನು ಮಾಯಕೊಂಡ ಕ್ಷೇತ್ರದಿಂದ ಶಿವಮೂರ್ತಿ ನಾಯಕ್ ಬದಲು ಬಸವರಾಜು, ತರೀಕೆರೆ ಕ್ಷೇತ್ರದಿಂದ ಶ್ರೀನಿವಾಸ್ ಬದಲು ಎಸ್ ಎಂ ನಾಗರಾಜ್, ತಿಪಟೂರು ಕ್ಷೇತ್ರದಿಂದ ಷಡಕ್ಷರಿ ಬದಲು ನಂಜಮರಿ, ಜಗಳೂರು ಕ್ಷೇತ್ರದಿಂದ ರಾಜೇಶ್ ಅವರ ಬದಲು ಎ ಎಲ್ ಪುಷ್ಪಾ, ಬಾದಾಮಿ ಕ್ಷೇತ್ರದಿಂದ ಚಿಮ್ಮನಕಟ್ಟಿ ಬದಲು ದೇವರಾಜ್ ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.

 ಮನೋಹರ್ ತಹಶೀಲ್ದಾರ್

ಕಲಬುರಗಿ ಗ್ರಾಮೀಣ ಭಾಗದಲ್ಲಿ ಹಾಲಿ ಶಾಸಕ ರಾಮಕೃಷ್ಣ ಅವರ ಬದಲು ವಿಜಯ್‍ಕುಮಾರ್, ವಿಜಯಪುರದಿಂದ ಮಕ್ಬುಲ್ ಬಾಗವಾನ್ ಬದಲು ಹಮೀದ್ ಮುಶ್ರಿಫ್, ಬಳ್ಳಾರಿಯಿಂದ ಎನ್‍ವೈ ಗೋಪಾಲಕೃಷ್ಣ ಬದ್ಲು ನಾಗೇಂದ್ರ, ಕೊಳ್ಳೇಗಾಲದಿಂದ ಜಯಣ್ಣ ಹಾಲಿ ಶಾಸಕರಾಗಿದ್ದು, ಇವರ ಬದಲು ಇದೀಗ ಕಾಂಗ್ರೆಸ್ ಹೈಕಮಾಂಡ್ ಎ.ಆರ್.ಕೃಷ್ಣಮೂರ್ತಿ ಹಾಗೂ ಸಿರಗುಪ್ಪದಿಂದ ನಾಗರಾಜ್ ಬದಲು ಮುರಳಿಕೃಷ್ಣ ಅವರನ್ನು ಆಯ್ಕೆ ಮಾಡಿ ಕಣಕ್ಕಿಳಿಸಲು ಕಾಂಗ್ರೆಸ್ ಸಜ್ಜಾಗಿದೆ.

Comments

Leave a Reply

Your email address will not be published. Required fields are marked *