ರಾಜಕೀಯ ಬೆಳವಣಿಗೆ ಅನುಕೂಲಕರವಾಗಿದ್ದು ಖುಷಿ ತಂದಿದೆ: ಬಿಎಸ್‍ವೈ ಫುಲ್ ಚೇಂಚ್

ಬೆಂಗಳೂರು: ರಾಜಕೀಯ ಬೆಳವಣಿಗೆ ಅನುಕೂಲಕರವಾಗಿದೆ. ನಾನು ಖುಷಿಯಾಗಿ ನೆಮ್ಮದಿಯಾಗಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಬಿಜೆಪಿಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿದೆ. ಮುಂಬೈನಲ್ಲಿ ಎಲ್ಲಾ ಅತೃಪ್ತ ಶಾಸಕರು ಒಗ್ಗಟ್ಟಾಗಿದ್ದಾರೆ. ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ. ಈ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ. ಹೀಗಾಗಿ ಹರ್ಷದಿಂದ ಇದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸಾಡೇ ಸಾತ್ ಮುಕ್ತಾಯ ಬಿಎಸ್‍ವೈ ಫುಲ್ ಜೋಷ್!

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಕೊಂಡ ಬಿ.ಎಲ್.ಸಂತೋಷ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಇದರಿಂದಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ಬರಲಿದೆ. ಆರ್‍ಎಸ್‍ಎಸ್ ಹಿನ್ನಲೆಯಿರುವ ವ್ಯಕ್ತಿಗೆ ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಇದರಿಂದ ಸಂತೋಷವಾಗಿದ್ದು, ಪಕ್ಷ ಸಂಘಟನೆ ಮತ್ತಷ್ಟು ಚುರುಕುಗೊಳ್ಳಿದೆ ಎಂದರು.

ಬಿಎಸ್‍ವೈ ಫುಲ್ ಚೇಂಚ್:
ಸದಾ ಗಂಭೀರವಾಗಿರುತ್ತಿದ್ದ ಬಿ.ಎಸ್.ಯಡಿಯೂರಪ್ಪ ಕಳೆದ ಎರಡು ದಿನದಿಂದ ಫುಲ್ ಖುಷ್ ಆಗಿದ್ದಾರೆ. ಕೊಂಚ ಮುಖ ಗಂಟು ಹಾಕಿಕೊಂಡೆ ಇರುತ್ತಿದ್ದ ಅವರ ಮುಖದಲ್ಲಿ ಈಗ ಮರೆಯಾಗದ ಮಂದಹಾಸ ಕಾಣಿಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಅತೃಪ್ತರು ಎಬ್ಬಿಸಿದ ರಾಜೀನಾಮೆ ಪರ್ವಕ್ಕೆ ಹಾಗೂ ಇಂದು ಘಟಾನುಘಟಿ ಮೈತ್ರಿ ಮುಖಂಡರ ಸಂಧಾನ ಸಭೆ ವಿಫಲವಾಗಿ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹಾರಿದ್ದರಿಂದ ಯಡಿಯೂರಪ್ಪನವರು ಫುಲ್ ಜೋಷ್‍ನಲ್ಲಿದ್ದಾರೆ.

ದವಳಗಿರಿಯಿಂದ ರೆಸಾರ್ಟಿಗೆ ಶಾಸಕಾಂಗ ಸಭೆಗೆ ತೆರಳುವ ಮುನ್ನ ಕ್ಯಾಮೆರಾ ಕಂಡು ಬಿ.ಎಸ್.ಯಡಿಯೂರಪ್ಪ ಅವರು ಥಂಬ್ಸ್ ಅಫ್ ಮಾಡಿ, ಖುಷಿ ಮೂಡ್ ವ್ಯಕ್ತಪಡಿಸಿದ್ದಾರೆ. ಶನಿವಾರವೂ ಮಾಧ್ಯಮಗಳ ಕ್ಯಾಮೆರಾಕ್ಕೆ ಪೋಸ್ ಕೊಡುತ್ತ ನಗು ನಗುತ್ತಾ ವಾಕ್ ಮಾಡಿದ್ದರು. ಇಂದು ಕೂಡ ಜೋಷ್‍ನಲ್ಲಿ ಇದ್ದಾರೆ.

Comments

Leave a Reply

Your email address will not be published. Required fields are marked *