ಡೆಲ್ಲಿಗೂ ಹೋದರೂ ಫೈನಲ್ ಆಗದ ಕ್ಯಾಬಿನೆಟ್ ಸರ್ಕಸ್: ಸಚಿವ ಸ್ಥಾನದ ಆಕಾಂಕ್ಷಿಗಳು ಯಾರು?

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಇದ್ದರೂ ಬಿಜೆಪಿಯಲ್ಲಿ ಸಂಪುಟ ಸರ್ಕಸ್ ಗಜಪ್ರಸವ ರೀತಿ ಆಗಿಬಿಟ್ಟಿದೆ. `ಎಲೆಕ್ಷನ್ ಕ್ಯಾಬಿನೆಟ್’ಗೆ ಹೈಕಮಾಂಡ್ ಇನ್ನೂ ಮನಸ್ಸು ಮಾಡಿಲ್ಲ. ದೆಹಲಿಗೆ ಹೋದರೂ ಸಿಎಂ ಬೊಮ್ಮಾಯಿ ಬರೀಗೈಯಲ್ಲಿ ವಾಪಸ್ ಬರುತ್ತಿದ್ದಾರೆ.

ಪ್ರಹ್ಲಾದ್ ಜೋಷಿ ಜೊತೆ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಭೇಟಿಯಾಗಿದ್ದರು. ಗೃಹ ಸಚಿವ ಅಮಿತ್‌ ಶಾ ಭೇಟಿಯ ನಂತರ ಮಧ್ಯಮಗಳ ಜೊತೆ ಮಾತನಾಡಿದ ಸಿಎಂ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆಯೂ ಚರ್ಚೆಯಾಗಿದೆ. ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ಮಾಡಿದ್ದು, ಜೆಪಿ ನಡ್ಡಾ ಅವರ ಜೊತೆಗೂ ಮಾತನಾಡುತ್ತೇನೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ನದಿ ಜೋಡಣೆ ವಿರೋಧಿಸಿ ಸಮಾವೇಶ : ಸ್ವರ್ಣವಲ್ಲಿ ಶ್ರೀ

ನಾನು ಯಾವುದೇ ಹೆಸರುಗಳನ್ನು ಅಮಿತ್ ಶಾ ಅವರಿಗೆ ಹೇಳಿಲ್ಲ. ಮುಂದಿನ ವಾರ ಬಹಳ ಮುಖ್ಯವಾಗಿದೆ. ಯಾಕೆಂದರೆ ಸ್ಥಳೀಯ ಚುನಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿ ಆಧಾರ ಬಗ್ಗೆ ಬದಲಾವಣೆ ಆಗಬಹುದು. ಬರುವ ಮೂರು ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಮಾಹಿತಿ ನೀಡಿದರು.

ಸಚಿವ ಸ್ಥಾನಕ್ಕೆ ಕಾದಿರೋರಿಗೆ ಗಿಫ್ಟ್ ಸಿಗುತ್ತಾ? ಹಾಲಿ ಸಚಿವರಿಗೆ ಏನಾದರೂ ಶಾಕ್ ಇದ್ಯಾ? ಚುನಾವಣಾ ವರ್ಷ ಆಗಿರುವುದರಿಂದ ದೊಡ್ಡ ಪ್ರಮಾಣದ ಬದಲಾವಣೆ ಆಗುತ್ತಾ? ಸಂಪುಟ ಪುನಾರಚನೆನಾ? ವಿಸ್ತರಣೆನಾ? ಅಥವಾ ಗುಜರಾತ್, ಯುಪಿ, ಉತ್ತರಾಖಂಡ್ ಮಾದರಿ ಅನುಸರಿಸುತ್ತಾ ಎನ್ನುವ ಪ್ರಶ್ನೆಗಳಿಗೆ  ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕಿದೆ. ಇದನ್ನೂ ಓದಿ: ದೇವಸ್ಥಾನದ ಮೇಲೆ ನಿರ್ಮಾಣವಾದ ಯಾವುದೇ ಮಸೀದಿಯನ್ನೂ ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ: ಬಿಜೆಪಿ ನಾಯಕ

ಸಚಿವ ಸ್ಥಾನ ಆಕಾಂಕ್ಷಿಗಳು
> ಪಿ.ರಾಜೀವ್, ಕುಡಚಿ ಶಾಸಕ
> ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿ
> ಅರವಿಂದ್ ಬೆಲ್ಲದ್, ಹು-ದಾ ಪಶ್ಚಿಮ ಶಾಸಕ
> ಬಸನಗೌಡ ಯತ್ನಾಳ್, ವಿಜಯಪುರ ನಗರ ಶಾಸಕ
> ಕೆ.ಜಿ.ಬೋಪಯ್ಯ, ವಿರಾಜಪೇಟೆ ಶಾಸಕ

> ರವಿಕುಮಾರ್, ಪರಿಷತ್ ಸದಸ್ಯ
> ಸಿ.ಪಿ.ಯೋಗೇಶ್ವರ್, ಪರಿಷತ್ ಸದಸ್ಯ
> ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕುಂದಾಪುರ ಶಾಸಕ
> ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷ
> ತಿಪ್ಪಾರೆಡ್ಡಿ, ಚಿತ್ರದುರ್ಗ ಶಾಸಕ

> ರಾಜೂಗೌಡ, ಸುರಪುರ ಶಾಸಕ
> ದತ್ತಾತ್ರೇಯ ಪಾಟೀಲ್ ರೇವೂರ್, ಕಲಬುರ್ಗಿ ದಕ್ಷಿಣ
> ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ
> ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಶಾಸಕ
> ರೇಣುಕಾಚಾರ್ಯ, ಹೊನ್ನಾಳ್ಳಿ ಶಾಸಕ
> ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ

Comments

Leave a Reply

Your email address will not be published. Required fields are marked *