ಏರಿಕೆ ಆಗಲಿದೆ ಮದ್ಯ ದರ – ಪ್ರತಿ ಬಲ್ಕ್ ಲೀಟರ್‌ಗೆ ಎಷ್ಟು ಏರಿಕೆ ಆಗುತ್ತೆ?

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಬಕಾರಿ ಸುಂಕವನ್ನು ಹೆಚ್ಚಿಸಿ ಮದ್ಯ ಪ್ರಿಯರಿಗೆ ಕಹಿ ಸುದ್ದಿ ನೀಡಿದ್ದಾರೆ.

ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6ರಷ್ಟು ಹೆಚ್ಚಿಸುವುದಾಗಿ ಸಿಎಂ ಪ್ರಕಟಿಸಿದ್ದಾರೆ.

ಅಬಕಾರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಒಟ್ಟು 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ನಿಗದಿ ಪಡಿಸಿತ್ತು. ಆದರೆ ಫೆಬ್ರವರಿ ಅಂತ್ಯದವರೆಗೆ 19,701 ಕೋಟಿ ರೂ. ಸಂಗ್ರಹವಾಗಿದೆ. 2020-21ನೇ ಆರ್ಥಿಕ ವರ್ಷಕ್ಕೆ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಕಳೆದ ವರ್ಷ ಕುಮಾರಸ್ವಾಮಿ ಅವರು ಮದ್ಯದ ಮೇಲಿನ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಶೇ.4ರಷ್ಟು ಹೆಚ್ಚಿಸಿದ್ದರು.

ಜಿಎಸ್‍ಟಿಯಲ್ಲಿ ಮದ್ಯ, ಪೆಟ್ರೋಲ್, ಡೀಸೆಲ್ ಸೇರ್ಪಡೆಯಾಗಬೇಕೆಂದು ಒತ್ತಾಯ ಕೇಳಿ ಬರುತ್ತಿದ್ದರೂ ಸರ್ಕಾರಗಳು ಸೇರ್ಪಡೆಗೊಳಿಸಲು ಹಿಂದೇಟು ಹಾಕುತ್ತಿವೆ. ಒಂದು ವೇಳೆ ಜಿಎಸ್‍ಟಿ ಅಡಿ ಬಂದರೆ ರಾಜ್ಯ ಸರ್ಕಾರಗಳಿಗೆ ಇಷ್ಟೊಂದು ತೆರಿಗೆ ಹಾಕಲು ಅವಕಾಶ ಇರುವುದಿಲ್ಲ. ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಮತ್ತು ಅಬಕಾರಿ ಸುಂಕಗಳಿಂದ ಹೆಚ್ಚು ಬೊಕ್ಕಸ ತುಂಬಿಸಿಕೊಳ್ಳುತ್ತವೆ. ಈ ಕಾರಣಕ್ಕೆ ಪ್ರತಿ ವರ್ಷದ ಬಜೆಟ್ ನಲ್ಲಿ ಅಬಕಾರಿ ಸುಂಕ, ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳವಾಗುತ್ತಲೇ ಇರುತ್ತದೆ.

Comments

Leave a Reply

Your email address will not be published. Required fields are marked *