ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್

ಬೆಂಗಳೂರು: 40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ (BJP) ತಯಾರಿ ನಡೆಸಿರುವಂತಿದೆ. ಬಿಜೆಪಿಯಲ್ಲಿ “ರೌಡಿ ಮೋರ್ಚಾ” ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ ಎಂದು ಸೈಲೆಂಟ್ ಸುನೀಲ (Silent Sunil) ಮತ್ತು ಫೈಟರ್ ರವಿ ಬಿಜೆಪಿ ಸೇರ್ಪಡೆ ಕುರಿತಾಗಿ ಟ್ವೀಟ್ ಮೂಲಕ ಕಾಂಗ್ರೆಸ್ (Congress) ವ್ಯಂಗ್ಯವಾಡಿದೆ.

ಟ್ವೀಟ್‍ನಲ್ಲಿ ಏನಿದೆ:
40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ! ಬಿಜೆಪಿಯಲ್ಲಿ “ರೌಡಿ ಮೋರ್ಚಾ” ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬೊಮ್ಮಾಯಿ (Basavaraj Bommai) ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ? ಇದನ್ನೂ ಓದಿ: ಬಿಜೆಪಿಗೆ ಗಲಭೆ ಎಬ್ಬಿಸಲು ರೌಡಿಗಳು ಬೇಕು: ಸಿದ್ದರಾಮಯ್ಯ

ಗಡಿಪಾರಾಗಿದ್ದ ಕ್ರಿಮಿನಲ್‍ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ರೌಡಿಗಳು, ಕ್ರಿಮಿನಲ್‍ಗಳೇ ಆದರ್ಶ ವ್ಯಕ್ತಿಗಳು! ಪೊಲೀಸರಿಂದ ಇಂತಹ ಆತಿಥ್ಯ ಪಡೆದ ಈ ವ್ಯಕ್ತಿಗೆ ರಾಜಾತಿಥ್ಯ ನೀಡುತ್ತಿದೆ ಬಿಜೆಪಿ ಸರ್ಕಾರ ಪೊಲೀಸರೆದುರು ತಲೆ ತಗ್ಗಿಸಿ ನಿಲ್ಲುವವನಿಗೆ ಅದೇ ಪೊಲೀಸರಿಂದ ಸೆಲ್ಯೂಟ್ ಹೊಡೆಸಲು ಹವಣಿಸುತ್ತಿದೆ ಬಿಜೆಪಿ. ಸರ್ಕಾರದ ನಿಷ್ಕ್ರಿಯತೆಗೆ ಬಿಜೆಪಿ ನಾಯಕರೇ ಸರ್ಟಿಫಿಕೇಟ್ ನೀಡುತ್ತಿದ್ದಾರೆ. 4 ವರ್ಷದಿಂದ ಕರ್ನಾಟಕದ ಅಭಿವೃದ್ಧಿ ಚಕ್ರ ನಿಂತಿದ್ದಷ್ಟೇ ಅಲ್ಲ, ಹಿಂದೆ ಚಲಿಸಿದೆ. ಬೊಮ್ಮಾಯಿ ಅವರೇ, ನಿಮ್ಮ ದಮ್ಮು ತಾಕತ್ತಿಗೆ ನಿಮ್ಮವರ ಸರ್ಟಿಫಿಕೇಟ್ ಸಾಕಲ್ಲವೇ? ಹೊಗೆಯಾಡುತ್ತಿರುವ ಬಿಜೆಪಿಯ ಕಿತ್ತಾಟ ಶೀಘ್ರದಲ್ಲೇ ಬೆಂಕಿಯಾಗಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ತಲೆ ಹೊಡೆದವರು, ಮನೆ ಹಾಳು ಮಾಡೋರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ – HDK

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *