ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಕೂ’ಗೆ ಬಿಜೆಪಿ – ಡಿಜಿಟಲ್ ಅಸ್ತಿತ್ವ ಬಲಪಡಿಸುವತ್ತ ಮುನ್ನುಡಿ

ಬೆಂಗಳೂರು: ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್ ಅಸ್ತಿತ್ವವನ್ನು ಬಲಪಡಿಸಲು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ವಿಭಾಗವು ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ – ಕೂನಲ್ಲಿ ತನ್ನ ಖಾತೆಯನ್ನು ತೆರೆದಿದೆ.

@BJP4Karnataka ಹ್ಯಾಂಡಲ್ ಮೂಲಕ ಪಕ್ಷದ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಿಚಾರಗಳನ್ನು ಬಿಜೆಪಿ ಕರ್ನಾಟಕ ವೇದಿಕೆಯಲ್ಲಿ ಹಂಚಿಕೊಂಡಿದೆ. “ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನ ಅತ್ಯಂತ ನೆಚ್ಚಿನ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಜಗತ್ತಿನಾದ್ಯಂತದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ದಿಗ್ಗಜ ನಾಯಕರ ಪೈಕಿ ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿದ್ದಾರೆ’ ಎಂದು ಬಿಜೆಪಿ ಕರ್ನಾಟಕ ಕೂ ಮಾಡಿದೆ.

Koo App

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನ ಅತ್ಯಂತ ನೆಚ್ಚಿನ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಜಗತ್ತಿನಾದ್ಯಂತದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ದಿಗ್ಗಜ ನಾಯಕರ ಪೈಕಿ ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿದ್ದಾರೆ.

BJP KARNATAKA (@BJP4Karnataka) 7 Nov 2021

“ಬಿಜೆಪಿ ಕರ್ನಾಟಕ ನಮ್ಮ ಬಹುಭಾಷಾ ವೇದಿಕೆಗೆ ಬಂದಿರುವುದು ಸಂತೋಷಕರ. ಇದು ಸ್ಥಳೀಯ ಭಾರತೀಯ ಭಾಷೆಗಳಾದ್ಯಂತ ಅಭಿವ್ಯಕ್ತಿಯನ್ನು ಶಕ್ತಗೊಳಿಸುತ್ತದೆ. ಕರ್ನಾಟಕದ ಜನರು ಈಗ ತಮ್ಮ ನೆಚ್ಚಿನ ಪಕ್ಷದೊಂದಿಗೆ ನೇರವಾಗಿ ಚರ್ಚಿಸಬಹುದಾಗಿದೆ ಮತ್ತು ಪಕ್ಷದ ಕುರಿತ ಎಲ್ಲ ಮಾಹಿತಿಯನ್ನು ಅವರ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದಾಗಿದೆ” ಎಂದು ಕೂ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋ ಫೋನ್‌ ನೆಕ್ಷ್ಟ್‌

ದೇಸಿ ಆ್ಯಪ್ ಕೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಕ್ರೀಡಾತಾರೆಯರು, ಸಿನಿಮಾ ತಾರೆಯರು ಮತ್ತು ಕ್ಷೇತ್ರಗಳಾದ್ಯಂತದ ವ್ಯಕ್ತಿಗಳ ಜೊತೆಗೆ, ಕರ್ನಾಟಕದ ರಾಜಕೀಯ ನಾಯಕರು ಕನ್ನಡದಲ್ಲಿ ‘ಕೂ’ ಮಾಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ @bsbommai,, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ @bsybjp, ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ @h_d_devegowda, ಕರ್ನಾಟಕ ಕಾಂಗ್ರೆಸ್ @inckarnataka ಮತ್ತು ಜನತಾ ದಳ @jds_official ಸೇರಿದಂತೆ ಈಗಾಗಲೇ ಕರ್ನಾಟಕದ ಅನೇಕ ಗಣ್ಯರು ಕೂ ಆ್ಯಪ್ ಪ್ರವೇಶಿಸಿದ್ದಾರೆ.

Koo App

ಕನ್ನಡ ಡಿಂಡಿಮದ ನಾದವು ಮುಗಿಲು ಮುಟ್ಟಿರುವ ಈ ಪುಣ್ಯದಿನದಂದು ನಾಡಿನ ರಚನೆಗೆ ಶ್ರಮಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ. ಬದುಕಿನುದ್ದಕ್ಕೂ ಗರ್ವದಿಂದ ಕನ್ನಡ ನುಡಿಯೋಣ, ಕನ್ನಡವನ್ನು ಪ್ರೀತಿಸೋಣ, ಕನ್ನಡಾಂಬೆಯ ಸೇವೆ ಮಾಡೋಣ. ನನ್ನ ಪ್ರೀತಿಯ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!

H D Devegowda (@h_d_devegowda) 1 Nov 2021


ಕೂ ಬಗ್ಗೆ: ಮಾರ್ಚ್ 2020ರಲ್ಲಿ ‘ಕೂ’ ಸ್ಥಾಪನೆಯಾಯಿತು. ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ, ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬಹುದು. ಭಾರತದಂತಹ ಕೇವಲ 10% ಇಂಗ್ಲಿಷ್ ಮಾತನಾಡುವ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಮ್ಮ ಸ್ವಂತ ಭಾಷೆಯ ಅನುಭವಗಳನ್ನು ನೀಡಲು ಮತ್ತು ಜನರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.

Comments

Leave a Reply

Your email address will not be published. Required fields are marked *