ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ತೆಲಗಿ ನಿಧನ

ಬೆಂಗಳೂರು: ಬಹುಕೋಟಿ ನಕಲಿಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ತೆಲಗಿ (56) ಸಾವನ್ನಪ್ಪಿದ್ದಾನೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿಯನ್ನು ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ರಾತ್ರಿ 8.30ರ ವೇಳೆಗೆ ತೆಲಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಹಾಗೂ ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ತೆಲಗಿಗೂ ವಿವಿಐಪಿ ಟ್ರೀಟ್ ಮೆಂಟ್ ಕೊಡ್ತಿದ್ದಾರೆ ಎಂಬ ಸುದ್ದಿ ಸಿಸಿಟಿವಿ ದೃಶ್ಯಾವಳಿಗಳ ಸಹಿತ ಬಿಡುಗಡೆಯಾಗಿತ್ತು.

2006ರ ಜನವರಿ 17ರಂದು ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಲಭಿಸಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ತೆಲಗಿಗೆ 2007ರ ಜೂನ್ 28ರಂದು 13 ವರ್ಷ ಶಿಕ್ಷೆಯಾಗಿತ್ತು.

Comments

Leave a Reply

Your email address will not be published. Required fields are marked *