ಬಾಡಿಗೆ ತಾಯ್ತನದ ಆಲೋಚನೆ ಮಾಡಿದ್ದೆನು: ಕರೀನಾ

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಾಡಿಗೆ ತಾಯ್ತನದ ಆಲೋಚನೆ ಮಾಡಿದ್ದೆನು ಎಂದು ಹೇಳುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

ನಾನು ಹಾಗೂ ಸೈಫ್ ಇಬ್ಬರೂ ಬಾಡಿಗೆ ತಾಯ್ತನದ ಬಗ್ಗೆ ಮಾತುಕತೆ ನಡೆಸಿದ್ದೆವು. ನಾರ್ಮಲ್ ಆಗಿ ಮಗುವನ್ನು ಪಡೆಯುವ ಪ್ರಯತ್ನ ಮಾಡೋಣ, ಆಗದಿದ್ದರೆ ಬಾಡಿಗೆ ತಾಯ್ತನದ ಬಗ್ಗೆ ಆಲೋಚಿಸೋಣ ಎಂದು ನಾವಿಬ್ಬರೂ ನಿರ್ಧರಿಸಿದ್ದೆವು. ಆದರೆ, ದೇವರ ದಯೆಯಿಂದ ಮಗುವಾಗಿದೆ. ಬಾಡಿಗೆ ತಾಯ್ತನ ಅನ್ನೋದು ನಮ್ಮ ಎರಡನೇ ಆಯ್ಕೆ ಆಗಿತ್ತು ಎಂದಿದ್ದಾರೆ ಅವರು.

ನಾನು ಸೈಫ್ ಮದುವೆ ಆದ ನಂತರದಲ್ಲಿ ನನ್ನ ಕರಿಯರ್ ಅಂತ್ಯಗೊಂಡಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮದುವೆ ನಂತರವೂ ವೃತ್ತಿಜೀವನಕ್ಕೆ ಧಕ್ಕೆ ಆಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮದುವೆ ಆದಾಗ ನನಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದರು. ಆದರೆ, ಈಗ ಅದು ಸುಳ್ಳು ಎಂಬುದು ಸಾಬೀತಾಗಿದೆ.  ಇದನ್ನೂ ಓದಿ: ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ: ಐಸಿಎಂಆರ್

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದು ಬಹಳ ಚರ್ಚೆಗೆ ಕಾರಣವಾಗಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಕರೀನಾ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ತೈಮೂರ್ ಅಲಿ ಖಾನ್ ಜನಿಸಿದ ನಾಲ್ಕು ವರ್ಷಗಳ ನಂತರದಲ್ಲಿ ಕರೀನಾಗೆ ಮತ್ತೊಂದು ಮಗು ಜನಿಸಿದೆ. ಫೆಬ್ರವರಿ ತಿಂಗಳಲ್ಲಿ ಹೊಸ ಸದಸ್ಯನ ಆಗಮನ ಆಗಿತ್ತು. ಇದಕ್ಕೂ ಮೊದಲು ಸೈಫ್ ಹಾಗೂ ಕರೀನಾ ಬಾಡಿಗೆ ತಾಯ್ತನದ ಬಗ್ಗೆ ಆಲೋಚನೆ ಮಾಡಿದ್ದರಂತೆ.

Comments

Leave a Reply

Your email address will not be published. Required fields are marked *