ಸನ್ನಿಲಿಯೋನ್ ಬೆಂಗ್ಳೂರು ಎಂಟ್ರಿಗೆ ಮತ್ತೊಮ್ಮೆ ವಿರೋಧ

ಬೆಂಗಳೂರು: ಹೊಸ ವರ್ಷ ಆಚರಣೆಗೆ ಸಿಲಿಕಾನ್ ಸಿಟಿಗೆ ಬಾಲಿವುಡ್ ಮೋಹಕ ನಟಿ ಸನ್ನಿಲಿಯೋನ್ ಅವರು ಬರುವುದನ್ನು ನಿಷೇಧಿಸಿದ್ದು, ಇದೀಗ ಮತ್ತೆ ಅವರ ಎಂಟ್ರಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಸನ್ನಿ ಲಿಯೋನ್ ಆಗಮನವನ್ನ ವಿರೋಧಿಸಿ ಇಂದು ಕನ್ನಡ ರಕ್ಷಣಾ ವೇದಿಕೆ ಯುವಸೇನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಕರವೇ ಯುವಸೇನೆಯ ಹರೀಶ್ ಮಾತನಾಡಿ, ನಿರ್ಮಾಪಕ ವಿಸಿ ವಾಡಿ ಉದಯನ್ ನಿರ್ಮಿಸುತ್ತಿರೋ ಸನ್ನಿ ಅಭಿನಯದ `ವೀರ ಮಹಾದೇವಿ’ ಎಂಬ ಚಿತ್ರವನ್ನು ವಿರೋಧಿಸಿದ್ರು. ಇದನ್ನೂ ಓದಿ: ನ್ಯೂ ಇಯರ್ ಗೆ ಸನ್ನಿ ಬರ್ತಾಳೆಂದು ಕಾಯ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ವಿರೋಧ ಯಾಕೆ?:
‘ವೀರ ಮಹಾದೇವಿ’ ಚಿತ್ರದಲ್ಲಿ ಸನ್ನಿಲಿಯೋನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದು ಅಪರಾಧ ಯಾವುದೇ ಕಾರಣಕ್ಕೂ ಈ ಚಿತ್ರದಲ್ಲಿ ಸನ್ನಿ ನಟಿಸಬಾರದು. ಹೀಗಾಗಿ ಈ ಚಿತ್ರದ ವಿರುದ್ಧ ಹೋರಾಟ ಮಾಡುತ್ತೀವಿ. ಸನ್ನಿ ಲಿಯೋನ್ ಎಲ್ಲಿಗೆ ಬಂದರೂ ನಾವು ಅವರನ್ನ ತಡೆ ಮಾಡ್ತೀವಿ. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ. ಆದ್ರೆ ನಾವು ಕಾರ್ಯಕ್ರಮವನ್ನ ವಿರೋಧ ಮಾಡುತ್ತಿಲ್ಲ. ಬದಲಾಗಿದೆ ಸನ್ನಿ ಲೀಯೊನ್ ಅವರನ್ನ ಮಾತ್ರ ವಿರೋಧಿಸುತ್ತೇವೆ ಅಂತ ಹೇಳಿದ್ರು.  ಇದನ್ನೂ ಓದಿ: ಸನ್ನಿ ನೈಟ್ಸ್ ಗೆ ಆಯ್ತು, ಈಗ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಗಳಿಂದ ವಿರೋಧ

ಸನ್ನಿ ಲಿಯೋನ್ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಬಾರದು. ಅವರ ಹಿನ್ನೆಲೆ ನೋಡಿದ್ರೆ ಬರೋದು ಬೇಡ ಅನ್ನಿಸುತ್ತೆ. ಸನ್ನಿ ಲಿಯೋನ್ ‘ನೀಲಿ ಚಿತ್ರದ ತಾರೆ’. ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ನಮ್ಮದು ಸಂಸ್ಕೃತಿಯ ನಾಡು. ಇದ್ರಿಂದ ನಮ್ಮ ಹಿಂದು ಸಂಸ್ಕೃತಿಗೆ ಹಾಳಾಗುತ್ತೆ ಅಂತ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಜೊತೆ ಸಭೆ ಮಾಡಿ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಅನ್ನೋದನ್ನ ತಿಳಿಸುತ್ತೇವೆ ಅಂದ್ರು.  ಇದನ್ನೂ ಓದಿ:ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

ಕಾರ್ಯಕ್ರಮವೇನು?:
ನವೆಂಬರ್ 3 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸನ್ನಿ, ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಲಿರುವವರಿದ್ದರು. ಆದ್ರೆ ಇದೀಗ ಸನ್ನಿ ಎಂಟ್ರಿಗೆ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ವಿರೋಧ ವ್ಯಕ್ತಪಡಿಸುತ್ತಿದೆ. ಇದನ್ನೂ ಓದಿ: `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ

ಸನ್ನಿ ಲಿಯೋನ್ ಬೆಂಗಳೂರು ಬರೋ ಬಗ್ಗೆ ನಿಮ್ಮ ಅಭಿಪ್ರಾಯವೇನು?- ಕಮೆಂಟ್ ಮಾಡಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *