ಪ್ರಶಾಂತ್ ನೀಲ್ ಚಿತ್ರಕ್ಕೆ ಕರಣ್‍ ಜೋಹಾರ್ ಎಂಟ್ರಿ

ಬಾಲಿವುಡ್‍ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್‍  (Karan Johar)ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಹಾಯ ಮಾಡಿದ್ದಾರೆ ಎನ್ನುವ ವಿಚಾರವೊಂದು ದಕ್ಷಿಣದ ಸಿನಿ ರಂಗದಲ್ಲಿ ಕೇಳಿ ಬರುತ್ತಿದೆ. ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ಕರಣ್ ಜೋಹಾರ್ ಅವರೇ ಟೈಟಲ್‍ ಹೆಸರಿಸಿದ್ದಾರೆ ಎನ್ನೋದು ಅದರ ತಾತ್ಪರ್ಯ.

ಟಾಲಿವುಡ್ ನಟ ಜ್ಯೂ.ಎನ್‌ಟಿಆರ್- ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಮೊನ್ನೆಯಿಂದ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಜೋಡಿ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಹಾಗಂತ ಅನಧಿಕೃತ ಘೋಷಣೆಯಾಗಿದೆ.

ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ (Dragon) ಎಂದು ಪ್ರಶಾಂತ್ ನೀಲ್ ಜಬರ್‌ದಸ್ತ್ ಆಗಿರುವ ಟೈಟಲ್ ಇಟ್ಟಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ತಾರಕ್ ಪೋಸ್ಟರ್‌ಗೂ ಇದೀಗ ಇಟ್ಟಿರುವ ‘ಡ್ರ್ಯಾಗನ್’ ಟೈಟಲ್‌ಗೂ ಹೊಂದುವಂತಿದೆ. ಈ ಟೈಟಲ್ ಸೂಚಿಸಿದ್ದು ಕರಣ್ ಜೋಹಾರ್ ಅಂತಿದ್ದಾರೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಜ್ಯೂ.ಎನ್‌ಟಿಆರ್ ಅವರು ವಾರ್ 2, ದೇವರ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಪ್ರಾಜೆಕ್ಟ್‌ಗಳ ನಂತರ ಪ್ರಶಾಂತ್ ನೀಲ್ ಜೊತೆಗಿನ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಜ್ಯೂ.ಎನ್‌ಟಿಆರ್ ಎನ್ನಲಾಗಿದೆ.

 

ಜ್ಯೂ.ಎನ್‌ಟಿಆರ್ ಇದೇ ಮೇ 20ರಂದು ತಮ್ಮ 1ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ವೇಳೆ, ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಶೂಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.