ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಆಲಿಯಾ ಭಟ್ ಮಗುನ ನೋಡೋಕೆ ಬಂದ ಕರಣ್

ಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ದಂಪತಿಗೆ ಮೊನ್ನೆಯಷ್ಟೇ ಹೆಣ್ಣು ಮಗುವಾಗಿದೆ. ಈಗಾಗಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಯಿಂದ ಮನೆಗೂ ಬಂದಾಗಿದೆ. ಆಲಿಯಾ ಭಟ್ ಮಗುವಿಗೆ ಜನ್ಮ ಕೊಟ್ಟಾಗ ಬಾಲಿವುಡ್ ನಿರ್ಮಾಪಕ ಕಂ ನಿರ್ದೇಶಕ ಕರಣ್ ಜೋಹಾರ್ ಈ ದೇಶದಲ್ಲೇ ಇರಲಿಲ್ಲವಂತೆ. ಹಾಗಾಗಿ ಅಂದು ಆಲಿಯಾ ಭಟ್ ನ ಮೀಟ್ ಮಾಡಿ, ಮಗುವನ್ನು ನೋಡುವುದಕ್ಕೆ ಆಗಿರಲಿಲ್ಲ. ದೇಶಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಗು ನೋಡಲು ಹೋಗಿದ್ದಾರೆ ಕರಣ್ ಜೋಹಾರ್.

ಕೋವಿಡ್ ಈಗಲೂ ಅಲ್ಲಲ್ಲಿ ಇರುವಾಗ, ಆಲಿಯಾ ಭಟ್ ತಮ್ಮ ಮಗುವನ್ನು ನೋಡಲು ಯಾರಿಗೂ ಬಿಡುತ್ತಿಲ್ಲವಂತೆ. ಸ್ವತಃ ಕುಟುಂಬದ ಸದಸ್ಯರು ಕೂಡ ಮಗುವಿನ ಹತ್ತಿರಕ್ಕೆ ಬರಲು ಒಪ್ಪುತ್ತಿಲ್ಲವಂತೆ. ಈ ಕಾರಣದಿಂದಾಗಿಯೇ ಕರಣ್ ಜೋಹಾರ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನಂತರ ಮಗುವನ್ನು ನೋಡಿದ್ದಾರಂತೆ. ಆಲಿಯಾ ಭಟ್ ಮಗುವನ್ನು ಪ್ರಥಮ ಬಾರಿಗೆ ಎತ್ತಿಕೊಂಡ ಸಿಲೆಬ್ರಿಟಿ ಕರಣ್ ಎನ್ನುವುದು ವಿಶೇಷ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

ಆಲಿಯಾ ಭಟ್ ಮೇಲೆ ಕರಣ್ ಜೋಹಾರ್ (Karan Johar) ಗೆ ವಿಶೇಷ ಪ್ರೀತಿ. ಆಲಿಯಾ ಮದುವೆಯಾದ ದಿನ ಕರಣ್ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟರ ಮಟ್ಟಿಗೆ ಆಲಿಯಾರನ್ನು ಅಭಿಮಾನಿಸುತ್ತಾರೆ ಕರಣ್. ಹೀಗಾಗಿ ತಮ್ಮ ಮಗುವನ್ನು ನೋಡಲು ಕರಣ್ ಗೆ ಅವಕಾಶ ನೀಡಿದ್ದಾರೆ ಆಲಿಯಾ ಮತ್ತು ಕಪೂರ್. ಹೆಣ್ಣು ಮಗುವನ್ನು ಕಂಡು ಕರಣ್ ಮುದ್ದಾಡಿದ್ದಾರೆ. ವಿಶೇಷ ಉಡುಗೊರೆಯನ್ನೂ ಅವರು ನೀಡಿದ್ದಾರಂತೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *