ಬಿಗ್ ಬಾಸ್‍ಗೆ ಎಂಟ್ರಿ ಕೊಡಲಿದ್ದಾರೆ ಕಪಿಲ್ ಶರ್ಮಾ!

ಮುಂಬೈ: ವಿವಾದಗಳಿಂದ ಈ ವರ್ಷ ಸುದ್ದಿಯಾಗಿರುವ ಕಪಿಲ್ ಶರ್ಮಾ ಹಿಂದಿಯ ಬಿಗ್ ಬಾಸ್-12ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಹೌದು. ಕೆಲವು ದಿನಗಳಿಂದ ಡಿಪ್ರೆಶನ್‍ಗೆ ಒಳಗಾಗಿದ್ದ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುತ್ತಿದ್ದರು. ಅತಿ ಹೆಚ್ಚು ಟಿಆರ್‍ಪಿ ಪಡೆಯುತ್ತಿದ್ದ ಕಪಿಲ್ ಶರ್ಮಾ ಶೋ ಕಲಾವಿದರ ಒಳಜಗಳದಿಂದಾಗಿ ನಿಂತು ಹೋಗಿತ್ತು. ಅದಾದ ಬಳಿಕ ಕಪಿಲ್ ಸೆಕೆಂಡ್ ಇನ್ನಿಂಗ್ಸ್ ಫ್ಯಾಮಿಲಿ ಟೈಮ್ ವಿಥ್ ಕಪಿಲ್ ಶರ್ಮಾ ಎಂಬ ಶೋ ಆರಂಭಿಸಿದ್ರು. ಅದೂ ಸಹ ಕಾರಣಾಂತರಗಳಿಂದ ನಿಂತು ಹೋಗಿತ್ತು.

ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳು ಇಲ್ಲದ ಕಾರಣ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಪಿಲ್ ಶರ್ಮಾ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಈ ಬಾರಿಯೂ ಎಂದಿನಂತೆ ಬಾಲಿವುಡ್ ಭಾಯಿಜಾನ್ ಬಿಗ್ ಬಾಸ್-12 ಶೋ ನಿರೂಪಣೆಯನ್ನು ಮಾಡಲಿದ್ದಾರೆ. ಸಲ್ಮಾನ್ ಆಪ್ತರಾಗಿರುವ ಕಪಿಲ್ ಗೆ ಈ ಬಾರಿ ಸ್ಪರ್ಧಿಯಾಗುವಂತೆ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಬಗ್ಗೆ ಕಪಿಲ್, ಸಲ್ಮಾನ್ ಖಾನ್ ಅಥವಾ ಶೋ ನಡೆಸಿಕೊಡುವ ವಾಹಿನಿಯಾಗಲಿ ಇದೂವರೆಗೂ ಅಧಿಕೃತ ಪಡಿಸಿಲ್ಲ. ಈ ಹಿಂದೆ ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ನೀಡಿದ್ದಕಪಿಲ್, ಒಂದು ವೇಳೆ ಸ್ಪರ್ಧಿಯಾಗಿ ಬಂದ್ರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆಯಂತೂ ಸಿಗಲಿದೆ.

ಡಾ,ಮಶೂರ್ ಗುಲಾಟಿ ಪಾತ್ರದಾರಿ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋದಿಂದ ಹೊರ ನಡೆದ ಬಳಿಕ ಕಾರ್ಯಕ್ರಮ ಸಂಪೂರ್ಣ ನೆಲಕಚ್ಚಿತು. ನಂತರದ ಕೆಲವು ದಿನಗಳಲ್ಲಿ ಬೇರೆ ಕಲಾವಿದರನ್ನು ಕರೆ ತಂದರೂ ಕಪಿಲ್ ಯಶಸ್ವಿಯಾಗಲಿಲ್ಲ. ಸದ್ಯ ಏಕಾಂತದಲ್ಲಿರುವ ಕಪಿಲ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದ್ರೆ ಕಾರ್ಯಕ್ರಮದಿಂದ ಹೊರ ಬಂದ ಇತರೆ ಕಲಾವಿದರು ಬೇರೆ ಬೇರೆ ಶೋ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.

Comments

Leave a Reply

Your email address will not be published. Required fields are marked *