ಗುಡ್​ನ್ಯೂಸ್​​ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್-1’ (Kantara Chapter1) ಸಿನಿಮಾ ಬಿಡುಗಡೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ.

2025ರ ಅಕ್ಟೋಬರ್‌ 2ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ (Hombale Films) ಘೋಷಣೆ ಮಾಡಿದೆ. ಏಕಕಾಲಕ್ಕೆ ಕನ್ನಡ, ಹಿಂದಿ, ಇಂಗ್ಲಿಷ್‌ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದು ಹೊಂಬಾಳೆ ಸಂಸ್ಥೆ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಈಗಾಗಲೇ ಕೇವಲ ಕಾಂತಾರ ಚಾಪ್ಟರ್ 1 ಸಿನಿಮಾದ ಪೋಸ್ಟರ್ ನೋಡಿದ ಅಭಿಮಾನಿಗಳು ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾಂತಾರ ಚಾಪ್ಟರ್ 1 ಸಿನಿಮಾ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್​​ನಲ್ಲೂ ರಿಲೀಸ್ ಮಾಡುವ ನಿರ್ಧಾರವಾಗಿದೆ.

‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ‘ಕಾಂತಾರ ಚಾಪ್ಟರ್ 1’ ಕೂಡ ಉತ್ತಮ ಕಥೆಯೊಂದಿಗೆ ಅದ್ಧೂರಿಯಾಗಿ ತರಲು ಈಗಾಗಲೇ ಚಿತ್ರತಂಡ ಚಿತ್ರೀಕರಣದಲ್ಲಿ ತೊಡಗಿದೆ. ಇತ್ತೀಚೆಗೆ ಮಳೆಯ ಅವಾಂತರದಿಂದ ‘ಕಾಂತಾರ 1’ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಸಹ ಕೊಟ್ಟಿದ್ದರು. ಮಳೆ ಕಮ್ಮಿಯಾದ ಹಿನ್ನೆಲೆ ಮತ್ತೆ ಶೂಟಿಂಗ್ ಭರದಿಂದ ನಡೆಯುತ್ತಿದೆ.

ಅಂದಹಾಗೆ, ‘ಕಾಂತಾರ ಚಾಪ್ಟರ್ 1’ ಸಿನಿಮಾದ ರಿಷಬ್ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಕ್ತಸಿಕ್ತ ಅವತಾರದಲ್ಲಿ ರಿಷಬ್ ಮಿಂಚಿದ್ದರು. ಹಾಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.