`ಕಾಂತಾರ 2’ಗೆ ಚಾಲನೆ ಸಿಗುವ ಮುನ್ನವೇ ಹೊಸ ಸಿನಿಮಾ ನಿರ್ಮಾಣದತ್ತ ರಿಷಬ್ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಲ್ಟಿ ಟ್ಯಾಲೆಂಟೆಡ್ ಎಂಬುದು ಈಗಾಗಲೇ ಪ್ರೂವ್ ಆಗಿದೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇದೀಗ `ಕಾಂತಾರ 2′ ಚಿತ್ರ ನಿರ್ದೇಶನಕ್ಕೂ ಮೊದಲೇ ಹೊಸ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಆಸ್ಕರ್‌ ಗೆದ್ದಿದ್ದಕ್ಕೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ಕಾಂತಾರ 2 RISHAB SHETTY

`ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಈಗಾಗಲೇ ಸಾಕಷ್ಟು ಸಿನಿಮಾವನ್ನ ನಿರ್ಮಾಣ ಮಾಡಿ ಗೆದ್ದಿದ್ದಾರೆ. ಇದೀಗ `ಲಾಫಿಂಗ್ ಬುದ್ಧ’ (Laughing Buddha) ಎಂಬ ಚಿತ್ರವನ್ನ’ Rishab Shettty Films ಮೂಲಕ ರಿಷಬ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

`ಕಾಂತಾರ 2′ ಚಿತ್ರದ ಸ್ಕ್ರಿಪ್ಟ್ ವರ್ಕ್‌ನಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ತೆರೆಮರೆಯಲ್ಲಿ ಸಿನಿಮಾಗಾಗಿ ಸಕಲ ತಯಾರಿ ಮಾಡ್ತಿದ್ದಾರೆ. ʻಕಾಂತಾರʼ ಪಾರ್ಟ್ 2 ನಿರ್ದೇಶನ ಮಾಡುವ ಮೊದಲೇ ನಿರ್ಮಾಣದತ್ತ ರಿಷಬ್ ವಾಲಿದ್ದಾರೆ. `ಲಾಫಿಂಗ್ ಬುದ್ಧ’ ಚಿತ್ರ ನಿರ್ಮಾಣ ಮಾಡುವುದಾಗಿ 3 ವರ್ಷಗಳ ಹಿಂದೆಯೇ ಅನೌನ್ಸ್ ಆಗಿತ್ತು. ಇದೀಗ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ `ಲಾಫಿಂಗ್ ಬುದ್ಧ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಪ್ರಮೋದ್ ಶೆಟ್ಟಿ (Pramod Sheety) ಮತ್ತು ತೇಜು ಬೆಳವಾಡಿ (Teju Belavadi) ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂ. ಭರತ್ ರಾಜ್ ನಿರ್ದೇಶನ ಮಾಡ್ತಿದ್ದಾರೆ. ದೇಹ ತೂಕ ಹೆಚ್ಚಿಸಿಕೊಂಡಿರುವ ಪೊಲೀಸ್ ಪೇದೆಯೊಬ್ಬನ ಜೀವನದಲ್ಲಿ ನಡೆಯುವ ಕಥೆ ಮತ್ತು ಅದರ ತಿರುವುಗಳನ್ನು ಕತೆ ಒಳಗೊಂಡಿದೆ. ಹಾಸ್ಯದ ಜೊತೆ ಎಮೋಷನಲ್ ದೃಶ್ಯಗಳನ್ನ ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಪೊಲೀಸ್‌ ಪೇದೆ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *