ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara Chapter 1) ತನ್ನ ಬ್ಲಾಕ್‌ಬಸ್ಟರ್‌ ಓಟವನ್ನು ಮುಂದುವರಿಸಿದೆ. ರಿಲೀಸ್‌ ಆಗಿ ಕೇವಲ 2 ವಾರಗಳಲ್ಲೇ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ 717.50 ಕೋಟಿ ರೂ. ಗಳಿಸಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಘೋಷಿಸಿದೆ.

ಅ.2 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಯಿತು. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಮೊದಲ ವಾರದಲ್ಲಿ ವರ್ಲ್ಡ್‌ವೈಡ್‌ ದಾಖಲೆಯ 500 ಕೋಟಿ ಕ್ಲಬ್‌ ಸೇರಿತ್ತು. ಸಿನಿಮಾ ಬಿಡುಗಡೆಯಾಗಿ 2 ವಾರ ಕಳೆದರೂ ಜನರು ಥಿಯೇಟರ್‌ಗಳತ್ತ ಲಗ್ಗೆಯಿಟ್ಟಿದ್ದಾರೆ.

 

View this post on Instagram

 

A post shared by Hombale Films (@hombalefilms)

ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂತಾರ ಚಾಪ್ಟರ್‌ 1 ಎರಡು ವಾರಗಳಲ್ಲಿ ವಿಶ್ವಾದ್ಯಂತ 717.50 ಕೋಟಿ + ಕ್ಲಬ್‌ ಸೇರಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ದೀಪಾವಳಿ ಆಚರಿಸಿ ಎಂದು ಹೊಂಬಾಳೆ ಫಿಲ್ಮ್ಸ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮತ್ತೆ ವೀಕೆಂಡ್‌ ಬಂದಿದ್ದು, ಥಿಯೇಟರ್‌ಗಳಲ್ಲಿ ಹೆಚ್ಚಿನ ಟಿಕೆಟ್‌ ಬುಕ್‌ ಆಗುವ ಸಾಧ್ಯತೆ ಇದೆ. ದೀಪಾವಳಿ ಕೂಡ ಸಮೀಪಿಸುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮತ್ತಷ್ಟು ಕಲೆಕ್ಷನ್‌ ಆಗಬಹುದು ಎನ್ನಲಾಗಿದೆ.

ಕಾಂತಾರ ಚಾಪ್ಟರ್‌ 1 ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty), ಗುಲ್ಶನ್‌ ದೇವಯ್ಯ, ರುಕ್ಮಿಣಿ ವಸಂತ್‌, ಜಯರಾಮ್‌, ಪ್ರಮೋದ್‌ ಶೆಟ್ಟಿ, ಅಚ್ಚುತ್‌ ರಾವ್‌ ಸೇರಿ ಅನೇಕ ಪ್ರಮುಖರು ನಟಿಸಿದ್ದಾರೆ. ರಿಷಬ್‌ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.