ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

ಸೌತ್ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಪಾರ್ವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ದೇವಿ ಅವತಾರದಲ್ಲಿ ನಟಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

ಡೈರೆಕ್ಟರ್ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಪ್ರಭಾಸ್ ಜೊತೆ ಕಾಜಲ್ ನಟಿಸಿದ್ದಾರೆ. ಪಾರ್ವತಿ ದೇವಿಯಾಗಿ ನಟಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿನ ನಟಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಬಿಳಿ ಬಣ್ಣದ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ನೋಡಿದ್ರೆ ದೈವಿಕ ಕಳೆ ಎದ್ದು ಕಾಣುತ್ತಿದೆ. ಅವರೇ ಈ ಪಾತ್ರಕ್ಕೆ ಸೂಕ್ತ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನೂ ‘ಕಣ್ಣಪ್ಪ’ ಚಿತ್ರವನ್ನು ಮೋಹನ್ ಬಾಬು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಪ್ರಭಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನೂ ನಟಿಯ ಬಳಿ ಹಲವು ಸಿನಿಮಾಗಳಿವೆ. ಅದರಲ್ಲಿ ಸಲ್ಮಾನ್‌ ಖಾನ್‌ ನಟನೆಯ ‘ಸಿಖಂದರ್‌’ ಸಿನಿಮಾದಲ್ಲಿ ಕಾಜಲ್‌ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿಯಾಗಿದ್ದಾರೆ. 2025ರ ಈದ್‌ ಹಬ್ಬದಂದು ರಿಲೀಸ್‌ ಆಗಲಿದೆ.