ಬೆಳಗಾವಿ: ದಶಕಗಳ ನಂತರ ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನ ಕನ್ನಡಿಗರ ಪಾಲಾಗಿದೆ.
ಸರ್ಕಾರದ ಮೀಸಲಾತಿ ಆದೇಶದಿಂದಾಗಿ ಈ ಬಾರಿ ಬೆಳಗಾವಿ ಮೇಯರ್ ಪಟ್ಟ ಕನ್ನಡಿಗರ ಪಾಲಿಗೆ ಒಲಿದು ಬಂದಿದೆ. ಈ ಬಾರಿ ಮೇಯರ್ ಹುದ್ದೆಯನ್ನು ಎಸ್‍ಟಿ ಸಮುದಾಯಕ್ಕೆ ಮೀಸಲಿರಿಸಲಾಗಿತ್ತು. ಎಂಇಎಸ್ ಗುಂಪಿನಲ್ಲಿ ಎಸ್ಟಿ ಸಮುದಾಯಕ್ಕೆ ಸೇರಿದ ಯಾವ ಪಾಲಿಕೆ ಸದಸ್ಯರು ಇರದ ಕಾರಣ ಕನ್ನಡ ಪರ ಪಾಲಿಕೆ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.

ಕನ್ನಡಪರ ಪಾಲಿಕೆ ಸದಸ್ಯರಲ್ಲಿ ಇಬ್ಬರು ಎಸ್‍ಟಿ ಅಭ್ಯರ್ಥಿಗಳಿದ್ದೂ, ಬಸವರಾಜ್ ಚಿಕ್ಕಲದಿನ್ನಿ ಮತ್ತು ಸುಚೇತನಾ ಗಂಡಗದರಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಸವರಾಜ್ ಚಿಕ್ಕಲದಿನ್ನಿಯವರ ಪರವಾಗಿ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ರೆ, ಸುಚೇತನಾರ ಪರವಾಗಿ ಶಾಸಕ ಫಿರೋಜ್ ಶೇಠ್ ಬ್ಯಾಟಿಂಗ್ ಬೀಸಿದ್ದರು. ಬಸವಾರಜ್ ಚಿಕ್ಕಲದಿನ್ನಿ ಪರ ಸದಸ್ಯರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿ ನೇರವಾಗಿ ಇಂದು ಪಾಲಿಕೆಗೆ ಆಗಮಿಸಿದ್ದಾರೆ.
ಬಸವರಾಜ್ ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಪಾಲಿಕೆ ಒಟ್ಟು 58 ಸದಸ್ಯರನ್ನು ಒಳಗೊಂಡಿದ್ದು, 32 ಎಂಇಎಸ್ ಪಕ್ಷದ ಸದಸ್ಯರಿದ್ದಾರೆ. ಕನ್ನಡ ಮತ್ತು ಉರ್ದು ಪರ 26 ಸದಸ್ಯ ಬಲವನ್ನು ಹೊಂದಿದೆ.
https://www.youtube.com/watch?v=Qe6R5_8c_l8


Leave a Reply