ಊಹಿಸಲಾಗದ ರೋಚಕ ಟ್ವಿಸ್ಟ್- ಪ್ರೇಕ್ಷಕರಿಗೆ ಶಾಕ್ ನೀಡಿದ ಮೌನಂ!

ನಿಶಬ್ದಕ್ಕೂ ಶಬ್ದವಿದೆ ಎಂಬ ಟ್ಯಾಗ್ಲೈನ್ ಮೂಲಕ ಸದ್ದು ಮಾಡಿದ್ದ ‘ಮೌನಂ’ ಚಿತ್ರ ಇಂದು ಬಿಡುಗಡೆಯಾಗಿದೆ. ತಂದೆ-ಮಗನ ನವಿರಾದ ಬಾಂಧವ್ಯ ಇರೋ ಚಿತ್ರ ಮೌನಂ. ತಂದೆಗೆ ಮಗನೇ ಸರ್ವಸ್ವ, ಮಗನಿಗೆ ಅಪ್ಪನೇ ಪ್ರಪಂಚ ತಂದೆ ಪಾತ್ರದಲ್ಲಿ ಅವಿನಾಶ್ ಅಭಿನಯ ಅಮೋಘುವಾಗಿ ಮೂಡಿ ಬಂದಿದೆ. ಕಥೆಗೆ ತಕ್ಕಂತೆ ಹಲವು ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಅವಿನಾಶ್ ಈ ಚಿತ್ರದ ಜೀವಾಳ. ತಂದೆ-ಮಗನ ನಡುವೆ ಪ್ರೀತಿಸುವ ಹುಡುಗಿ ಬಂದಾಗ ಏನೆಲ್ಲ ಆಗುತ್ತೆ ಅನ್ನೋದನ್ನ ಮೌನಂ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಫ್ಲ್ಯಾಶ್ ಬ್ಯಾಕ್‍ನಿಂದ ಶುರುವಾಗೋ ಕಥೆ ಆರಂಭದಲ್ಲೇ ಚಿತ್ರದ ಮೇಲೆ ಸೆಳೆತ ಉಂಟು ಮಾಡುತ್ತೆ. ಇದಕ್ಕೂ ಕಥೆಗೂ ಏನು ನಂಟಿದೆ ಅನ್ನೋದಕ್ಕೆ ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಅಪ್ಪ-ಮಗನ ಬಾಂಧವ್ಯಕ್ಕೆ ಪ್ರೀತಿಯ ಲೇಪನ ಹಚ್ಚಿರುವ ನಿರ್ದೇಶಕರು ಮಯೂರಿ, ಬಾಲಾಜಿ ಪ್ರೇಮಕಥೆಯಲ್ಲಿ ಇಟ್ಟಿರುವ ಟ್ವಿಸ್ಟ್ ಶಾಕ್ ನೀಡುತ್ತದೆ. ಅಪ್ಪ-ಮಗ ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿರುತ್ತಾರೆ ಅನ್ನೋ ವಿಷ್ಯ ನೋಡುಗರಿಗೆ ಮುಂದೇನಾಗುತ್ತೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತೆ. ಊಹಿಸಲಾರದ ಸಡನ್ ಟ್ವಿಸ್ಟ್, ಟರ್ನ್‍ಗಳು ಚಿತ್ರದಲ್ಲಿ ಸಾಕಷ್ಟಿದ್ದು ಚಿತ್ರದುದ್ದಕ್ಕೂ ಸಖತ್ ಥ್ರಿಲ್ ನೀಡುತ್ತೆ. ಇಲ್ಲಿ ಮಯೂರಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆಗಿ ಅಭಿನಯಿಸಿದ್ದು, ಎರಡು ಶೇಡ್ ನಲ್ಲಿಯೂ ಗಮನ ಸೆಳೆಯುತ್ತಾರೆ.

ಚಿತ್ರ: ಮೌನಂ
ನಿರ್ದೇಶನ: ರಾಜ್ ಪಂಡಿತ್
ನಿರ್ಮಾಪಕ: ಶ್ರೀಹರಿ
ಸಂಗೀತ: ಆರವ್ ರಿಶಿಕ್
ಛಾಯಾಗ್ರಹಣ: ಶಂಕರ್
ತಾರಾಬಳಗ: ಮಯೂರಿ, ಬಾಲಾಜಿ, ಅವಿನಾಶ್, ರಿತೇಶ್, ನಯನ, ಕೆಂಪೇಗೌಡ, ಇತರರು.

Rating: 3.5/5

Comments

Leave a Reply

Your email address will not be published. Required fields are marked *