ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ದುಡಿದ ಅನುಭವ ಇರೋ ನಿರ್ದೇಶಕ ಸೂನಗಹಳ್ಳಿ ರಾಜು ಡೈರೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ. ಮೊದಲ ಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿರೋ ಇವರು ಗ್ರಾಮೀಣ ಭಾಗದ ಕಥಾನಕವನ್ನು ತಮ್ಮ ಚಿತ್ರದ ಕಥೆಯನ್ನಾಗಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಆನೆಬಲ’ ಎಂಬ ಟೈಟಲ್ ಇಟ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಸೂನಗಹಳ್ಳಿ ರಾಜು ಇಂದು ತಮ್ಮ ಆನೆಬಲ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.
‘ಆನೆಬಲ’ ಚಿತ್ರದಲ್ಲಿ ಹೊಸತಂಡವನ್ನು ಕಟ್ಟಿಕೊಂಡು ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ಸೂನಗಹಳ್ಳಿ ರಾಜು ಪ್ರೇಕ್ಷಕರಿಗೆ ಮಂಡ್ಯ ಸೊಗಡನ್ನು ಉಣಬಡಿಸಲಿದ್ದಾರೆ. ಮಂಡ್ಯ ಭಾಗದ ಜಾನಪದ ಆಚರಣೆಯನ್ನೇ ಇಟ್ಟುಕೊಂಡು ಕಥೆ, ಚಿತ್ರಕಥೆ ಹೆಣೆದು ಕೇವಲ ಹೊಸ ಕಲಾವಿದರನ್ನೇ ಹಾಕಿಕೊಂಡು ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಎಲ್ಲೂ ಗುಟ್ಟು ರಟ್ಟು ಮಾಡದ ನಿರ್ದೇಶಕರು ಇಂದು ಟ್ರೈಲರ್ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಜನತಾ ಟಾಕೀಸ್ ಬ್ಯಾನರ್‍ನಡಿ ಆನೆಬಲ ಚಿತ್ರ ನಿರ್ಮಾಣವಾಗಿದ್ದು, ಸಾಗರ್, ರಕ್ಷಿತ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಕೆ.ಜೆ ಬೆಟ್ಟೇಗೌಡ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಇಂದು ಬಿಡುಯಾಗಲಿರೋ ಚಿತ್ರದ ಟ್ರೈಲರ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

Leave a Reply