ಕೆಎಸ್‌ಆರ್‌ಟಿಸಿ ಟಿಕೆಟ್‌ನಲ್ಲಿ ಕನ್ನಡ ಕಗ್ಗೊಲೆ – ಪ್ರಯಾಣಿಕರ ಆಕ್ರೋಶ

ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಬಸ್ಸು ಟಿಕೆಟ್‌ನಲ್ಲೇ ಕನ್ನಡ ಭಾಷೆಯ (Kannada) ಕಗ್ಗೊಲೆಯಾಗಿದೆ. ಊರಿನ ಹೆಸರನ್ನು ಸರಿಯಾಗಿ ಮುದ್ರಿಸದ್ದಕ್ಕೆ ಪ್ರಯಾಣಿಕರೊಬ್ಬರು ಕೆಎಸ್‌ಆರ್‌ಟಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ಬಾಣಾವರದಿಂದ ಪ್ರಯಾಣಿಕರೊಬ್ಬರು (Passenger) ತಿಪಟೂರಿಗೆ ಟಿಕೆಟ್‌ ತೆಗೆದುಕೊಂಡಿದ್ದರು ಈ ವೇಳೆ ʼತಿಪಟೂರುʼ ಜಾಗದಲ್ಲಿ ʼತಿಪಟರುʼ ಎಂದು ಮುದ್ರಣವಾಗಿರುವ ಟಿಕೆಟ್‌ ಅನ್ನು ನಿರ್ವಾಹಕರು ನೀಡಿದ್ದರು.‌ ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ


ಸಂಜೆ 5:22ಕ್ಕೆ ಪ್ರಯಾಣಿಕರು ತಿಪಟೂರಿನಿಂದ ಬಾಣಾವರಕ್ಕೆ ಹೊರಟಿದ್ದಾರೆ. ಈ ವೇಳೆ ಊರಿನ ಹೆಸರನ್ನ ಬರೆಯುವುದನ್ನು ಬಿಟ್ಟು ಊಎಉಉ ಎಂದು  ಮುದ್ರಣವಾಗಿರುವ ಟಿಕೆಟ್‌ ಅನ್ನು ನಿಗಮ ನೀಡಿದೆ. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​

ಈ ಟಿಕೆಟ್‌ ನೋಡಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಎರಡು ಟಿಕೆಟ್‌ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ, ಮಾನ್ಯ ಸಾರಿಗೆ ಸಚಿವರೇ ಸಂಸ್ಥೆಯ ಸಾರಿಗೆ ವಾಹನದಲ್ಲಿ ಕನ್ನಡದ ಪರಿಸ್ಥಿತಿ ನೋಡಿ. ಇದು ಯಾಂತ್ರಿಕ ತೊಂದರೆ ಇರಬಹುದು. ಆದರೂ ಹೀಗೆ ಆಗಬಾರದು ಅಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.