ರಾತ್ರೋರಾತ್ರಿ ಬೆಂಗಳೂರಿನ ಖಾಲಿ ಸೈಟ್‍ನಲ್ಲಿ ಎದ್ದು ನಿಂತ ಭುವನೇಶ್ವರಿ!

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಬಿಎಂಪಿಯ ಒಣ ಪ್ರತಿಷ್ಟೆಯಿಂದ ಒಂದು ವಾರ ಪಾಲಿಕೆಯ ಖಾಲಿ ಸೈಟಿನ ಮುಳ್ಳಿನಲ್ಲಿ ಮಲಗಿದ್ದ ಭುವನೇಶ್ವರಿ ದೇವಿ, ರಾತ್ರೋರಾತ್ರಿ ನಗರದ ಖಾಲಿ ಸೈಟಿನಲ್ಲಿ ಎದ್ದು ನಿಂತಿದ್ದಾಳೆ.

ಹೌದು.ನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಬಿಬಿಎಂಪಿ ಜಾಗದಲ್ಲಿ ರಾತ್ರೋರಾತ್ರಿ, ಕನ್ನಡ ಸಾಹಿತ್ಯ ಪರಿಷತ್‍ನವರು ಭುವನೇಶ್ವರಿ ತಾಯಿಯ ಪುತ್ಥಳಿಯನ್ನ ನಿರ್ಮಿಸಿದ್ದಾರೆ.

ಜಿಲ್ಲಾ ಕನ್ನಡ ಭವನವನ್ನು ನಿರ್ಮಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಭುವನೇಶ್ವರಿ ದೇವಿ ಪುತ್ಥಳಿಯನ್ನು ನಿರ್ಮಿಸಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದು ಕಾನೂನು ಬಾಹಿರ ಅಂತ ಸ್ಥಳೀಯ ಕಾರ್ಪೋರೇಟರ್ ರಮೇಶ್ ಕೂಡ ಕೂಡ ವಿರೋಧಿಸಿದ್ದಾರೆ.

ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ, ನಾವು ಎರಡು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದೇವೆ. ನಗರದ ಶಾಸಕರಿಗೆ ಸಂಸದರಿಗೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಈ ಬಗ್ಗೆ ಮನವಿ ಕೂಡ ಮಾಡಿದ್ದೇವೆ. ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಅವರು ಕೂಡ ಬೆಂಬಲಿಸಿದ್ದಾರೆ. ಆದರೆ ಕೆಲವರ ಕುತಂತ್ರದಿಂದ ಪಾಲಿಕೆ ಇದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಹೇಳಿದ್ದಾರೆ.

ಬಿಬಿಎಂಪಿ ಈ ಸ್ಥಳವನ್ನು ಉದ್ಯಾನವನಕ್ಕಾಗಿ ಮೀಸಲಿಟ್ಟಿದೆ. ಆದರೆ ಈಗ ಜಿಲ್ಲಾ ಕಸಾಪದ ಸದಸ್ಯರು ಏಕಾಏಕಿ ಬಂದು ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಈ ಜಾಗವನ್ನು ಕಬಳಿಸಲು ಯತ್ನಿಸಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸಿದ್ದು, ವಾರ್ಡಿನ ಎಂಜಿನಿಯರೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *