ಅನ್ನ ಉಳಿದಿದೆಯಾ? ಹೀಗೆ ರುಚಿಕರವಾದ ದೋಸೆ ಮಾಡಿ

ಲಾಕ್‍ಡೌನ್ ಸಡಿಲಿಕೆ ಬಳಿಕ ಬಹುತೇಕರಿಗೆ ಕೆಲಸಕ್ಕೆ ಹೋಗುವ ತವಕ ಮತ್ತು ಸಂಜೆ ಬೇಗ ಮನೆ ಸೇರಿಕೊಳ್ಳಲು ಅವಸರ. ಸುಮಾರು 40 ದಿನ ಮನೆಯಲ್ಲಿದ್ದವರಿಗೆ ಈಗ ಅಡುಗೆ ಮಾಡಿಕೊಳ್ಳಲು ಬೇಸರ. ಒಂದು ವೇಳೆ ಮಧ್ಯಾಹ್ನ ಮಾಡಿದ ಅನ್ನ ಉಳಿದಿದ್ದರೆ ಅದನ್ನೇ ಬಳಸಿ ರುಚಿಕರವಾದ ದೋಸೆಯನ್ನ ಮಾಡಬಹುದು. ಹೊಸ ರುಚಿಯಾದ ತಿಂಡಿಯೂ ಮಾಡಿದಂತೆ ಆಗುತ್ತೆ, ಆಹಾರ ಕೆಡದಂತೆ ನೋಡಿಕೊಂಡಂತೆಯೂ ಆಗುತ್ತೆ.

ಬೇಕಾಗುವ ಸಾಮಾಗ್ರಿಗಳು
ಅನ್ನ- 1 ಕಪ್
ಹಸಿ ಮೆಣಸಿನಕಾಯಿ-4
ಬೆಳ್ಳುಳ್ಳಿ- 6 ರಿಂದ 7 ಎಸಳು
ಕ್ಯಾರೆಟ್- 1
ಕೋತಂಬರಿ ಸೊಪ್ಪು
ಜೀರಿಗೆ- 1/2 ಟೀ ಸ್ಪೂನ್
ಕಾರ್ನ್ ಫ್ಲೋರ್ – 1/2 ಟೀ ಸ್ಪೂನ್
ಮೈದಾ ಹಿಟ್ಟು- 1/2 ಟೀ ಸ್ಪೂನ್
ಗೋಧಿ ಹಿಟ್ಟು – 1/2 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ

ಮಾಡುವ ವಿಧಾನ
* ಮಿಕ್ಸಿ ಜಾರಿಗೆ ಒಂದು ಕಪ್ ಅನ್ನ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ಒಂದು ಕಪ್ ನೀರಿನೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ.
* ರುಬ್ಬಿಕೊಂಡ ಮಿಶ್ರಣವನ್ನು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು, ಗೋಧಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕತ್ತರಿಸಿದ ಕೋತಂಬರಿ, ಜೀರಿಗೆ, ಕ್ಯಾರೆಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಗ್ಯಾಸ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಟಿಕೊಳ್ಳಿ. ಪ್ಯಾನ್ ಬಿಸಿಯಾಗ್ತಿದ್ದಂತೆ ಪ್ಯಾನ್‍ಗೆ ಎಣ್ಣೆ ಸವರಿ ಮಿಶ್ರಣವನ್ನ ದೋಸೆ ರೀತಿಯಲ್ಲಿ ಹಾಕಿ, ಎರಡು ಕಡೆ ಬೇಯಿಸಿದ್ರೆ ರುಚಿಕರವಾದ ತಿಂಡಿ ರೆಡಿ.

Comments

Leave a Reply

Your email address will not be published. Required fields are marked *