ಬರ್ತ್ ಡೇ ಖುಷಿಯಲ್ಲಿ ಕನ್ನಡ ರ‍್ಯಾಪರ್ – ಸಿನಿಮಾ ಸೇರ್ತಾರಾ ಚಂದನ್?

ಬೆಂಗಳೂರು: ಕನ್ನಡ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಇಂದು ತಮ್ಮ 29ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ನಾಗರಬಾವಿಯ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡ್ರು.

ಈ ವೇಳೆ ಮೈಸೂರಿನಿಂದ ಬಿಗ್‍ಬಾಸ್ ನಿವೇದಿತಾ ಗೌಡ ಹಾಗೂ ಅವರ ಪೋಷಕರು ಕೂಡ ಚಂದನ್ ಬರ್ತ್ ಡೇ ಸೆಲೆಬ್ರೇಷನ್‍ನಲ್ಲಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಚಂದನ್ ಶೆಟ್ಟಿ, ಬಿಗ್‍ಬಾಸ್ ನನಗೆ ಯೂ ಟರ್ನ್ ಕೊಟ್ಟಿದೆ. ಜನ ನನ್ನನ್ನು ಗುರುತಿಸಿ, ನನ್ನ ಸಾಂಗ್ ಗಳನ್ನು ಇಷ್ಟ ಪಟ್ಟಿದ್ದಾರೆ. ಅತೀ ಶೀಘ್ರದಲ್ಲಿ ಹೊಸ ಆಲ್ಬಂ ಸಾಂಗ್ ಬಿಡುಗಡೆ ಮಾಡೋದಾಗಿ ಹೇಳಿದ್ರು.

ಇಷ್ಟು ದಿನ ನನ್ನ ಬರ್ತ್ ಡೇ ಲಿಮಿಟೆಡ್ ಆಗಿತ್ತು. ಇದೀಗ ಇಂದು ನಾನು ಅಭಿಮಾನಗಳ ಜೊತೆ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದೇನೆ. ಹೆಸರು ಗಳಿಸುವುದಕ್ಕೂ ಮೊದಲು ಜನ ನನ್ನ ಯೂಟ್ಯೂಬ್ ನಲ್ಲಿ ಮಾತ್ರ ನೋಡಿ ಇಷ್ಟಪಟ್ಟಿದ್ದರು. ಆದ್ರೆ ಇದೀಗ ನಾನು ಬಿಸ್ ಬಾಸ್ ಗೆ ಬಂದ ಬಳಿಕ ನನ್ನ ಜೀವನದಲ್ಲಿ ಇಷ್ಟೊಂದು ಬದಲಾವಣೆ ಆಗಿದೆ ಅನ್ನೋದನ್ನು ನನಗೆ ಕಲ್ಪನೆ ಮಾಡಿಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲ. ಮಧ್ಯಾರಾತ್ರಿ ಜನ ಬಂದು ವಿಶ್ ಮಾಡಿದ್ದಾರೆ. ಹೀಗಾಗಿ ತುಂಬಾ ಸಂತಸವಾಗುತ್ತಿದೆ ಅಂತ ಹೇಳಿದ್ರು. ಇದನ್ನೂ ಓದಿ: ಚಂದನ್ ಶೆಟ್ಟಿ ಮದ್ವೆಯಾಗೋ ಹುಡುಗಿಯ ಬಳಿ ಈ ಗುಣಗಳು ಇರಬೇಕಂತೆ!

ಹೊಸ ಆಲ್ಬಂ ಬರುತ್ತಿದೆ. 5 ಸಾಂಗ್ ರಿಲೀಸ್ ಆಗುತ್ತಿದೆ. ದೊಡ್ಡ ಆಡಿಯೋ ಕಂಪೆನಿಯವರು ನನ್ನ ಆಲ್ಬಂ ನ ಖರೀದಿಸಿದ್ದಾರೆ ಅಂದ ಅವರು ಅತೀ ಶೀಘ್ರದಲ್ಲೇ ಕಂಪೆನಿ ಹೆಸರು ಹೇಳುವುದಾಗಿ ತಿಳಿಸಿ ಗೌಪ್ಯಾವಾಗಿಟ್ಟರು. ಒಟ್ಟಿನಲ್ಲಿ ಈ ವರ್ಷದಲ್ಲಿ 5 ಸಾಂಗ್ ಗಳು ಕೂಡ ರಿಲೀಸ್ ಆಗುತ್ತಿದೆ ಅಂದ್ರು.

ಇದೇ ವೇಳೆ ಸಿನಿಮಾಗೆ ಎಂಟ್ರಿ ಕೊಡುತ್ತೀರಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾಗೆ ಬರಲು ಆಸಕ್ತಿ ಇಲ್ಲ. ಹೀಗಾಗಿ ಮ್ಯೂಸಿಕ್ ವಿಡಿಯೋ ಮೇಲೆಯೇ ಹೆಚ್ಚಿನ ಗಮನಹರಿಸುತ್ತೇನೆ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *