ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

ಹೊಸಬರೇ ಸೇರಿಕೊಂಡು ’ಲೆಕ್ಕಾಚಾರ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಈ ಹಿಂದೆ ’ಸಖತ್ ರಿಸ್ಕ್ ’ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸೀಮಾ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ರಾಜೇಶ್‌ಗೌಡ ಮತ್ತು ಗಗನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಇಬ್ಬರು ಪ್ರೇಮಿಗಳ ಮುಗ್ದ ಪ್ರೇಮಕಥೆ, ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ. ನಿಷ್ಕಲ್ಮಶವಾಗಿರುವುದೇ ಪ್ರೀತಿ. ಒಲವೇ ಜೀವನ ಲೆಕ್ಕಾಚಾರ. ನಾಲ್ಕು ಹುಡುಗರು ಗ್ಯಾರೇಜ್‌ದಲ್ಲಿ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬೀಳುತ್ತಾರೆ. ಅವರುಗಳ ಲೆಕ್ಕಾಚಾರ ಏನಾಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ನಾಲ್ಕು ಹಾಡುಗಳಿಗೆ ಸಾಹಿತ್ಯ ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಅವರು ಗ್ಯಾಪ್ ನಂತರ ರಾಜೇಶ್‌ಕೃಷ್ಣನ್-ಅನುರಾಧಭಟ್ ಜೋಡಿಯಲ್ಲಿ ಗೀತೆಯನ್ನು ಹಾಡಿಸಿರುವುದು ವಿಶೇಷ. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

ಹುಡುಗಿಯರನ್ನು ರೇಗಿಸಿಕೊಂಡು ಕಾಲ ಕಳೆಯುವ ಹುಡುಗನಾಗಿ ಹರೀಶ್ ನಾಯಕ. ಬೆಂಗಳೂರಿನ ಯಶಸ್ವಿ..ಸಿ.ಆರ್ ನಾಯಕಿ. ಇವರೊಂದಿಗೆ ಕುಮಾರ್.ಎಂ.ಎಸ್., ಪ್ರೀತಂ, ಹರ್ಷಿತಾ, ಬಲರಾಂ, ಚಂದ್ರು ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಮೂಡಿಗೆರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಹಣ ರಾಜೇಶ್‌ಗೌಡ-ಗಗನ್, ಸಂಕಲನ ದುರ್ಗಾಪ್ರಸಾದ್.ಪಿ.ಎಸ್, ಸಾಹಸ ರಾಮ್‌ದೇವ್, ನೃತ್ಯ ಪ್ರಶಾಂತ್ ಅವರದಾಗಿದೆ. ಪ್ರಚಾರದ ಸಲುವಾಗಿ ಮೊನ್ನೆ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೆಗೌಡ, ಗಾಯಕಿ ಸಮನ್ವಿತಾಶರ್ಮಾ, ಸಿರಿಚಿಕ್ಕಣ್ಣ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರ ತಂದಿದೆ. ಇದಕ್ಕೂ ಮುನ್ನ ಹಾಡುಗಳು ಮತ್ತು ಟ್ರೈಲರ್‌ನ್ನು ತೋರಿಸಲಾಯಿತು.

Live Tv

Comments

Leave a Reply

Your email address will not be published. Required fields are marked *