ಕಾಮಿಡಿ ವೀಡಿಯೋ ಝಲಕ್ ಬಿಡುಗಡೆ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದ ‘ತೋತಾಪುರಿ’ ಚಿತ್ರತಂಡ

ಹಿಟ್ ಕಾಂಬಿನೇಷನ್ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಒಂದಾಗಿ ನಕ್ಕು ನಗಿಸಲು ಬರ್ತಿರೊ ಸಿನಿಮಾ ‘ತೋತಾಪುರಿ’. ನಾಲ್ಕು ವರ್ಷದ ನಂತರ ಒಂದಾಗಿರುವ ‘ನೀರ್ ದೋಸೆ’ ಜೋಡಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಸಿನಿಪ್ರಿಯರಿಗಿದೆ. ಮತ್ತೊಂದು ಹೈವೋಲ್ಟೇಜ್ ಕಾಮಿಡಿ ರಸದೌತಣವನ್ನು ತೆರೆ ಮೇಲೆ ಸವಿಯಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಇದೀಗ ಪ್ರಚಾರ ಕಾರ್ಯದ ಮುನ್ನುಡಿ ಎಂಬಂತೆ ಪುಟ್ಟದಾದ ವೀಡಿಯೋ ಝಲಕ್ ಬಿಡುಗಡೆ ಮಾಡಿ ಎಲ್ಲರ ಗಮನ ತನ್ನತ್ತ ಸೆಳೆದಿದೆ.

ಚಿತ್ರದ ಪ್ರಚಾರ ಕಾರ್ಯಕ್ಕೆಂದೇ ವಿಶೇಷವಾಗಿ ಚಿತ್ರೀಕರಿಸಿದ ವೀಡಿಯೋ ತುಣುಕು ಇದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಸಂಭಾಷಣೆ ವೈರಲ್ ಆಗುತ್ತಿದ್ದು. ನೋಡುಗರಿಗೆ ಸಖತ್ ಮಜಾ ನೀಡುತ್ತಿದೆ. ಚಿತ್ರತಂಡದ ವಿಶೇಷ ರೀತಿಯ ಪ್ರಚಾರ ಕಾರ್ಯ ಸದ್ಯ ಎಲ್ಲರ ಗಮನ ಸೆಳೆದಿದೆ. ಇಂಟ್ರಸ್ಟಿಂಗ್ ಆಗಿರೋ ಈ ವೀಡಿಯೋ ಮೂಲಕ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುವ ಸೂಚನೆ ಕೂಡ ಚಿತ್ರತಂಡ ನೀಡಿದೆ. ಇದನ್ನೂ ಓದಿ: ನಟ ಅಮಿತಾಬ್ ಬಚ್ಚನ್‍ರಿಂದ ಖರೀದಿ ಮಾಡಿದ್ದ ಐಷಾರಾಮಿ ಕಾರು ರಿಲೀಸ್

ಚಿತ್ರದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ರಂಜಿಸಲಿದ್ದು, ಮುಸ್ಲಿಂ ಯುವತಿ ಪಾತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ‘ತೋತಾಪುರಿ’ ಮೆರುಗು ಹೆಚ್ಚಿಸಲು ಖ್ಯಾತ ಕಲಾವಿದರ ದಂಡು ಚಿತ್ರದಲ್ಲಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ತಾರಾಬಳಗದಲ್ಲಿದ್ದಾರೆ. ‘ತೋತಾಪುರಿ’ ಚಿತ್ರ ಎರಡು ಸೀಕ್ವೆಲ್ ನಲ್ಲಿ ತೆರೆಗೆ ಬರುತ್ತಿದ್ದು, ಬಿಡುಗಡೆಗೂ ಮೊದಲೇ ಎರಡೂ ಸೀಕ್ವೆಲ್ ಚಿತ್ರೀಕರಣ ಮುಗಿಸಿ ಈಗಾಗಲೇ ಹೊಸ ದಾಖಲೆಯನ್ನೂ ಈ ಚಿತ್ರ ತನ್ನ ಖಾತೆಗೆ ಹಾಕಿಕೊಂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿರುವ ಈ ಚಿತ್ರವನ್ನು ಸುರೇಶ್ ಆಟ್ರ್ಸ್ ಬ್ಯಾನರ್ ನಲ್ಲಿ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

Comments

Leave a Reply

Your email address will not be published. Required fields are marked *