ಟ್ರೇಲರ್ ಹೊತ್ತು ತಂದ ‘ಪೆಟ್ರೋಮ್ಯಾಕ್ಸ್’ ಚಿತ್ರತಂಡ – ನಗುವಿನ ರಸದೌತಣ ಪಕ್ಕಾ ಎಂದ ಪ್ರೇಕ್ಷಕರು

ತೀಶ್ ನೀನಾಸಂ, ಹರಿಪ್ರಿಯ ಮೊದಲ ಬಾರಿ ತೆರೆಹಂಚಿಕೊಂಡಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನೀರ್ದೋಸೆ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ತೆರೆ ಮೇಲೆ ನಗುವಿನ ರಸದೌತಣ ಹಂಚಲು ಬರ್ತಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಬಹು ನಿರೀಕ್ಷಿತ ಹಾಗೂ ಸಖತ್ ಇಂಟ್ರೆಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಕಾಮಿಡಿ ಜೊತೆಗೆ ಗಂಭೀರ ಸಬ್ಜೆಕ್ಟ್, ಸೆಂಟಿಮೆಂಟ್ ಕೂಡ ಚಿತ್ರದಲ್ಲಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊತ್ತ ‘ಪೆಟ್ರೋಮ್ಯಾಕ್ಸ್’ ಚಿತ್ರಪ್ರೇಮಿಗಳ ಚಿತ್ತ ಕದಿಯದೇ ಇರದು ಎನ್ನುವಂತಿದೆ ಚಿತ್ರದ ಟ್ರೇಲರ್. ಟ್ರೇಲರ್ ಝಲಕ್ ಕಂಡು ಪ್ರೇಕ್ಷಕ ಮಹಾಶಯರು ಸಖತ್ ಥ್ರಿಲ್ ಆಗಿದ್ದಾರೆ. ಸಿನಿಮಾ ಮೇಲಿನ ತಮ್ಮ ಕ್ಯೂರಿಯಾಸಿಟಿಯನ್ನು ಹೊರಹಾಕಿದ್ದಾರೆ. ಸತೀಶ್ ನೀನಾಸಂ ಹಾಗೂ ಹರಿಪ್ರಿಯ ಜೋಡಿ ಮೇಲೂ ಸಾಕಷ್ಟು ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಂಡಿದ್ದು, ತೆರೆ ಮೇಲೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿರುವ ಈ ಜೋಡಿ ಯಾವ ರೀತಿ ಕಮಾಲ್ ಮಾಡಲಿದೆ ಎನ್ನುವ ಕಾತುರವು ನೋಡುಗರಲ್ಲಿದೆ. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ

ಮೈಸೂರಿನ ಸುತ್ತಾಮುತ್ತ 36 ದಿನಗಳಲ್ಲಿ ಚಿತ್ರೀಕರಣ ಮುಗಿಸಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರಕ್ಕೆ ನಿರಂಜನ್ ಬಾಬು ಕ್ಯಾಮೆರಾ ನಿರ್ದೇಶನ, ಸುರೇಶ್ ಅರಸ್ ಸಂಕಲನ, ಅನೂಪ್ ಸೀಳಿನ್ ಸಂಗೀತ ಸಾರಥ್ಯವಿದೆ. ಚಿತ್ರದಲ್ಲಿ ಕಾರುಣ್ಯ ರಾಮ್, ನಾಗಭೂಷಣ, ವಿಜಯಲಕ್ಷೀಸಿಂಗ್, ಗೊಂಬೆಗಳ ಲವ್ ಖ್ಯಾತಿಯ ಅರುಣ್, ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ‘ಪೆಟ್ರೋಮ್ಯಾಕ್ಸ್’ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದೆ.

 

Comments

Leave a Reply

Your email address will not be published. Required fields are marked *