ಟ್ರೈಲರ್ ಮೂಲಕ ದುಷ್ಟರ ವಿರುದ್ಧ ಸಿಡಿದೆದ್ದ ಸಿಂಗ!

ಬೆಂಗಳೂರು: ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ಚಿರಂಜೀವಿ ಸರ್ಜಾ ಮಾಸ್ ಲುಕ್ಕಲ್ಲಿ ಮಿಂಚಿರೋ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಪೋಸ್ಟರ್ ಮೂಲಕವೇ ಅದು ಬಯಲಾಗಿತ್ತು. ಇದೀಗ ಈ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಈ ಮೂಲಕವೇ ಚಿರು ನಿರ್ವಹಿಸಿರೋ ಪಾತ್ರದ ಅಸಲಿ ಖದರ್ ಎಂಥಾದ್ದೆಂಬುದು ಸ್ಪಷ್ಟವಾಗಿಯೇ ಬಹಿರಂಗಗೊಂಡಿದೆ.

ಈ ಚಿತ್ರದ್ದು ಪಕ್ಕಾ ಮಾಸ್ ಕಥಾನಕವೆಂಬುದರ ಸುಳಿವಿನೊಂದಿಗೇ ತೆರೆದುಕೊಳ್ಳುವ ಈ ಟ್ರೈಲರ್‍ನಲ್ಲಿ ಚಿರಂಜೀವಿ ಸರ್ಜಾ ಸಿಂಗನಾಗಿ ಅಬ್ಬರಿಸಿದ್ದಾರೆ. ಪ್ರೇಮಿಯಾಗಿ ಪುಳಕವೆಬ್ಬಿಸುತ್ತಲೇ ದುಷ್ಟರ ವಿರುದ್ಧ ಸೆಟೆದು ನಿಲ್ಲೋ ಮೂಲಕ ಮೈನವಿರೇಳುವಂತೆ ಮಾಡಿದ್ದಾರೆ. ಇದರೊಂದಿಗೇ ಇತರೆ ಒಂದಷ್ಟು ಪಾತ್ರಗಳೂ ರಿವೀಲ್ ಆಗಿವೆ. ರವಿಶಂಕರ್, ಬಿ ಸುರೇಶ್ ಮುಂತಾದವರ ಪಾತ್ರಗಳೂ ರಗಡ್ ಆಗಿರೋದರ ಸೂಚನೆಯನ್ನೂ ಈ ಟ್ರೈಲರ್ ಬಿಟ್ಟುಕೊಟ್ಟಿದೆ.

ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಚಿರಂಜೀವಿ ಸರ್ಜಾ ಈವರೆಗೂ ಹಲವಾರು ಮಾಸ್ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸಿಂಗನ ಖದರ್ ಬೇರೆಯದ್ದೇ ದಿಕ್ಕಿನಲ್ಲಿದೆ. ಇಲ್ಲಿ ಮಾಫಿಯಾ ಡಾನ್‍ಗಳೊಂದಿಗೆ ಸೆಣಸೋ ಮಾಸ್ ಕಥೆಯ ಜೊತೆಗೆ ನವಿರಾದ ಪ್ರೇಮ ಕಥೆಯೂ ಇದೆ. ಇಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಚಿರು ಜೋಡಿಯಾಗಿ ನಟಿಸಿದ್ದಾರೆ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನೂ ಮುಗಿಸಿಕೊಂಡಿರೋ ಚಿತ್ರ ತಂಡ ಶೀಘ್ರದಲ್ಲಿಯೇ ತೆರೆಗೆ ಬರಲು ತಯಾರಿ ನಡೆಸಿದೆ.

Comments

Leave a Reply

Your email address will not be published. Required fields are marked *